ವೆಲ್ಲಿಂಗ್ಟನ್: ಬೇ ಓವಲ್ ಅಂಗಳದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬಿಜೆ ವಾಟ್ಲಿಂಗ್ (ಬ್ಯಾಟಿಂಗ್ 119; 298ಎ, 15ಬೌಂ) ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ವಾಟ್ಲಿಂಗ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (65; 108ಎ, 7ಬೌಂ, 1ಸಿ) ಅವರ ಶತಕದ ಜೊತೆಯಾಟದ ಬಲದಿಂದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಶನಿವಾರದ ಅಂತ್ಯಕ್ಕೆ 141 ಓವರ್‌ಗಳಲ್ಲಿ 6 ವಿಕೆಟ್‌ಗೆ 394ರನ್ ಕಲೆಹಾಕಿದೆ. ಇದರೊಂದಿಗೆ 41ರನ್‌ಗಳ ಮುನ್ನಡೆ ಗಳಿಸಿದೆ.
4 ವಿಕೆಟ್‌ಗೆ 144ರನ್‌ಗಳಿಂದ ಮೂರನೇ ದಿನದಾಟ ಮುಂದುವರಿಸಿದ ಕೇನ್ ವಿಲಿಯಮ್ಸನ್ ಬಳಗ ಮೊದಲ ಅವಧಿಯಲ್ಲಿ ಎಚ್ಚರಿಕೆಯಿಂದ ಆಡಿತು. ವಾಟ್ಲಿಂಗ್ ಮತ್ತು ಹೆನ್ರಿ ನಿಕೋಲ್ಸ್ (41; 125ಎ, 5ಬೌಂ) ಐದನೇ ವಿಕೆಟ್‌ಗೆ 70ರನ್ ಕಲೆಹಾಕಿ ತಂಡದ ಮೊತ್ತವನ್ನು ದ್ವಿಶತಕದ ಸನಿಹಕ್ಕೆ ತಂದು ನಿಲ್ಲಿಸಿದರು.
71ನೇ ಓವರ್‌ನಲ್ಲಿ ಹೆನ್ರಿ ಔಟಾದರು. ಬಳಿಕ ವಾಟ್ಲಿಂಗ್ ಮತ್ತು ಗ್ರ್ಯಾಂಡ್‌ಹೋಮ್ ಅವರ ಜೊತೆಯಾಟ ರಂಗೇರಿತು. ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ ಈ ಜೋಡಿ ಆರನೇ ವಿಕೆಟ್‌ಗೆ 119ರನ್ ಸೇರಿಸಿತು. ತಂಡದ ಖಾತೆಯಲ್ಲಿ 316ರನ್‌ಗಳಿದ್ದಾಗ ಗ್ರ್ಯಾಂಡ್‌ಹೋಮ್ ಪೆವಿಲಿಯನ್ ಸೇರಿದರು.
ನಂತರ ವಾಟ್ಲಿಂಗ್ ಅವರು ಮಿಷೆಲ್ ಸ್ಯಾಂಟನರ್ (ಬ್ಯಾಟಿಂಗ್ 31; 103ಎ, 1ಬೌಂ, 1ಸಿ) ಜೊತೆ ಮತ್ತೊಂದು ಸುಂದರ ಇನಿಂಗ್ಸ್ ಕಟ್ಟಿದರು. ಇವರು ಮುರಿಯದ ಏಳನೇ ವಿಕೆಟ್ ಪಾಲುದಾರಿಕೆಯಲ್ಲಿ 78ರನ್ ಗಳಿಸಿ ಆತಿಥೇಯರ ಮುನ್ನಡೆಗೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್:ಪ್ರಥಮ ಇನಿಂಗ್ಸ್, 124 ಓವರ್‌ಗಳಲ್ಲಿ 353
ನ್ಯೂಜಿಲೆಂಡ್: ಮೊದಲ ಇನಿಂಗ್ಸ್; 141 ಓವರ್‌ಗಳಲ್ಲಿ 6 ವಿಕೆಟ್‌ಗೆ 394
ಹೆನ್ರಿ ನಿಕೋಲ್ಸ್ 41
ಬಿಜೆ ವಾಟ್ಲಿಂಗ್ ಬ್ಯಾಟಿಂಗ್ 119
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 65
ಸ್ಯಾಮ್ ಕರನ್ 74ಕ್ಕೆ2
ಬೆನ್ ಸ್ಟೋಕ್ಸ್ 37ಕ್ಕೆ2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.