ADVERTISEMENT

19 ವರ್ಷ ದೊಳಗಿನವರ ‘ಟೆಸ್ಟ್‌’ ಪಂದ್ಯ: ಭಾರತಕ್ಕೆ ಮಣಿದ ಆಸ್ಟ್ರೇಲಿಯಾ

ಪಿಟಿಐ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
<div class="paragraphs"><p>ಅರ್ಧಶತಕ ಗಳಿಸಿದ ನಿಖಿಲ್‌ ಕುಮಾರ್‌ –ಪಿಟಿಐ ಚಿತ್ರ</p></div>

ಅರ್ಧಶತಕ ಗಳಿಸಿದ ನಿಖಿಲ್‌ ಕುಮಾರ್‌ –ಪಿಟಿಐ ಚಿತ್ರ

   

ಚೆನ್ನೈ: ನಿಖಿಲ್‌ ಕುಮಾರ್‌ (ಔಟಾಗದೇ 55;71ಎ) ಮತ್ತು ನಿತ್ಯಾ ಪಾಂಡ್ಯ (51;86ಎ) ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡವು 19 ವರ್ಷ ದೊಳಗಿನವರ ‘ಟೆಸ್ಟ್‌’ ಪಂದ್ಯ ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ 3 ರನ್‌ಗಳ ಹಿನ್ನಡೆ ಅನುಭವಿಸಿದ್ದ ‍ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 64.4 ಓವರ್‌ಗಳಲ್ಲಿ 214 ರನ್‌ಗೆ ಕುಸಿಯಿತು. ಮಂಗಳವಾರ 39 ಓವರುಗಳಲ್ಲಿ 4ಕ್ಕೆ 110 ಗಳಿಸಿದ್ದ ತಂಡವು ಮೂರನೇ ದಿನವಾದ ಬುಧವಾರ ಮೊಹಮ್ಮದ್ ಎನಾನ್ (79ಕ್ಕೆ 6) ದಾಳಿಗೆ ತತ್ತರಿಸಿತು.

ADVERTISEMENT

ಗುರಿ ಬೆನ್ನಟ್ಟಿದ ಭಾರತ, ಒಂದು ಹಂತದಲ್ಲಿ 167 ರನ್‌ಗೆ ಏಳು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಿಖಿಲ್‌ ಎಚ್ಚರಿಕೆಯ ಆಟವಾಡಿ ಗೆಲುವಿನ ರೂವಾರಿಯಾದರು. ತಂಡವು 61.1 ಓವರ್‌ಗಳಲ್ಲಿ 8 ವಿಕೆಟ್‌ಗೆ 214 ರನ್‌ ಗಳಿಸಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌:

ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 293; ಭಾರತ: 296.

ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 67.4 ಓವರುಗಳಲ್ಲಿ 214 (ಏಡನ್ ಒ ಕಾನರ್ 35; ಮೊಹಮ್ಮದ್ ಎನಾನ್ 79ಕ್ಕೆ 6, ಸೋಹಂ ಪಟವರ್ಧನ್ 27ಕ್ಕೆ 3).


ಭಾರತ:
61.1 ಓವರ್‌ಗಳಲ್ಲಿ 8ಕ್ಕೆ 214 (ನಿತ್ಯಾ ಪಾಂಡ್ಯ 51, ನಿಖಿಲ್‌ ಕುಮಾರ್‌ ಔಟಾಗದೇ 55, ಕೆ.ಪಿ. ಕಾರ್ತಿಕೇಯ 35; ಏಡನ್ ಒ ಕಾನರ್ 27ಕ್ಕೆ 4, ವಿಶ್ವ ರಾಮ್‌ಕುಮಾರ್ 75ಕ್ಕೆ 3).

ಪಂದ್ಯದ ಆಟಗಾರ: ನಿಖಿಲ್‌ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.