ADVERTISEMENT

ಉದ್ದೀಪನ ಮದ್ದುಸೇವನೆ: ಶ್ರೀಲಂಕಾ ಕ್ರಿಕೆಟಿಗ ನಿರೋಶನ್‌ ಡಿಕ್ವೆಲ್ಲಾ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 16:19 IST
Last Updated 17 ಆಗಸ್ಟ್ 2024, 16:19 IST
<div class="paragraphs"><p> ನಿರೋಶಾನ್‌ ಡಿಕ್ವೆಲ್ಲಾ          </p></div>

ನಿರೋಶಾನ್‌ ಡಿಕ್ವೆಲ್ಲಾ

   

ಕೊಲಂಬೊ: ಲಂಕನ್ ಪ್ರೀಮಿಯರ್‌ ಲೀಗ್‌ ವೇಳೆ ಉದ್ದೀಪನ ಮದ್ದುಸೇವನೆ ತಡೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ರಾಷ್ಟ್ರೀಯ ತಂಡದ ವಿಕೆಟ್‌ ಕೀಪರ್‌ ನಿರೋಶನ್ ಡಿಕ್ವೆಲ್ಲಾ ಅವರನ್ನು ಶ್ರೀಲಂಕಾ ಕ್ರಿಕೆಟ್‌ ಅಮಾನತು ಮಾಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಗಾಲೆ ಮಾರ್ವೆಲ್ಸ್ ತಂಡಕ್ಕೆ ಈ ಎಡಗೈ ಆಟಗಾರ ನಾಯಕರಾಗಿದ್ದರು. 

ADVERTISEMENT

‘ಅಮಾನತು ಆದೇಶ ಶುಕ್ರವಾರದಿಂದಲೇ ಜಾರಿಗೆ ಬಂದಿದ್ದು, ಮುಂದಿನ  ಸೂಚನೆವರೆಗೆ ಮುಂದುವರಿಯಲಿದೆ. ಕ್ರೀಡೆಯಲ್ಲಿ ಡೋಪಿಂಗ್ ಕಳಂಕ ತೊಡೆದುಹಾಕುವ ಭಾಗವಾಗಿ ಲಂಕಾ ಪ್ರೀಮಿಯರ್‌ ಲೀಗ್‌ ವೇಳೆ ಮದ್ದುಸೇವನೆ ಪರೀಕ್ಷೆ ನಡೆಸಲಾಗಿತ್ತು‘ ಎಂದು ಶ್ರೀಲಂಕಾ ಕ್ರಿಕೆಟ್‌ ಹೇಳಿಕೆ ತಿಳಿಸಿದೆ.

31 ವರ್ಷದ ನಿರೋಶನ್ 2023ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಶ್ರೀಲಂಕಾ ತಂಡಕ್ಕೆ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.