ADVERTISEMENT

ಕ್ರಿಕೆಟ್: ಶರವೇಗದ ದ್ವಿಶತಕ ಗಳಿಸಿದ ಚಾದ್ ಬೋವ್ಸ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:47 IST
Last Updated 23 ಅಕ್ಟೋಬರ್ 2024, 23:47 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ವೆಲಿಂಗ್ಟನ್: ನ್ಯೂಜಿಲೆಂಡ್‌ ಆಟಗಾರ ಚಾದ್ ಬೌವ್ಸ್‌ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶರವೇಗದ ದ್ವಿಶತಕ ಗಳಿಸಿದರು. 

ADVERTISEMENT

ಬುಧವಾರ ಇಲ್ಲಿ ನಡೆದ ಫೋರ್ಡ್ ಟ್ರೋಫಿ ಕ್ರಿಕೆಟ್  ಟೂರ್ನಿಯಲ್ಲಿ ಕ್ಯಾಂಟರ್‌ಬರಿ ತಂಡವನ್ನು ಪ್ರತಿನಿಧಿಸಿದ ಚಾದ್ ಅವರು ಒಟಾಗೊ ವಿರುದ್ಧ ನಡೆದ ಪಂದ್ಯದಲ್ಲಿ 103 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಇದರೊಂದಿಗೆ ಭಾರತದ ಎನ್‌. ಜಗದೀಶನ್ ಮತ್ತು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರ ದಾಖಲೆಗಳನ್ನು ಮೀರಿ ನಿಂತರು.

ಜಗದೀಶನ್ ಮತ್ತು ಟ್ರಾವಿಸ್ ಅವರು 114 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು. ತಮಿಳುನಾಡಿನ ಜಗದೀಶನ್ 2 ವರ್ಷಗಳ ಹಿಂದೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ಎದುರು ಈ ಸಾಧನೆ ಮಾಡಿದ್ದರು. ಸೌಥ್ ಆಸ್ಟ್ರೆಲಿಯಾದ ಹೆಡ್ ಅವರು ಕ್ವಿನ್ಸ್‌ಲೆಂಡ್ ವಿರುದ್ಧ ಮಾರ್ಷ್ ಕಪ್‌ (2022) ಟೂರ್ನಿಯಲ್ಲಿ ಮಿಂಚಿನ ದ್ವಿಶತಕ ಗಳಿಸಿದ್ದರು. 

ದಕ್ಷಿಣ ಆಫ್ರಿಕಾದಲ್ಲಿ ಜನಿಸಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಚಾದ್ ಈ ಏಕದಿನ ಪಂದ್ಯದಲ್ಲಿ ಒಟ್ಟು 110 ಎಸೆತಗಳಲ್ಲಿ 205 ರನ್ ಗಳಿಸಿ ಔಟಾದರು. 53 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಇದು ಅವರ 100ನೇ ಲಿಸ್ಟ್ ಎ ಪಂದ್ಯ. 27 ಬೌಂಡರಿ ಮತ್ತು ಏಳು ಸಿಕ್ಸರ್‌ ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.