ADVERTISEMENT

ಏಕದಿನ ಪಂದ್ಯ: ಜಿಂಬಾಬ್ವೆಗೆ ಮಣಿದ ಪಾಕಿಸ್ತಾನ

ಏಜೆನ್ಸೀಸ್
Published 25 ನವೆಂಬರ್ 2024, 0:24 IST
Last Updated 25 ನವೆಂಬರ್ 2024, 0:24 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬುಲಾವಯೊ (ಜಿಂಬಾಬ್ವೆ): ಸಿಕಂದರ್ ರಝಾ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಜಿಂಬಾಬ್ವೆ ತಂಡ, ಮಳೆಯ ಆಟ ಕಂಡ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾನುವಾರ ಡಿಎಲ್‌ಎಸ್‌ ಆಧಾರದಲ್ಲಿ 80 ರನ್‌ಗಳಿಂದ ಸೋಲಿಸಿತು.

ADVERTISEMENT

ಜಿಂಬಾಬ್ವೆ 7 ವಿಕೆಟ್‌ಗೆ 125 ರನ್‌ಗಳಾಗಿದ್ದಾಗ ಆಡಲು ಇಳಿದ ರಝಾ ಉಪಯುಕ್ತ 39 ರನ್ ಗಳಿಸಿದರು. 9ನೇ ಕ್ರಮಾಂಕದಲ್ಲಿ ಆಡಿದ ರಿಚರ್ಡ್‌ ಎನ್‌ಗರಾವಾ (48) ಜೊತೆ ಎಂಟನೇ ವಿಕೆಟ್‌ಗೆ 62 ರನ್ ಸೇರಿಸಿದರು. ನಂತರ ಬೌಲಿಂಗ್‌ನಲ್ಲೂ ಮಿಂಚಿ 7 ರನ್ನಿಗೆ 2 ವಿಕೆಟ್‌ ಪಡೆದರು.

ಪಾಕಿಸ್ತಾನ ತಂಡ 2019ರ ನಂತರ ಇದೇ ಮೊದಲ ಬಾರಿ ಅನುಭವಿ ಬ್ಯಾಟರ್‌ ಬಾಬರ್ ಆಜಂ ಅವರಿಗೆ ವಿಶ್ರಾಂತಿ ನೀಡಿತು. ತಂಡ ತನ್ನ ಬೆಂಚ್‌ ಸಾಮರ್ಥ್ಯ ಪರೀಕ್ಷೆಗೊಳಪಡಿಸಿತು.

ಸ್ಕೋರುಗಳು:

ಜಿಂಬಾಬ್ವೆ: 40.2 ಓವರುಗಳಲ್ಲಿ 205 (ಸಿಕಂದರ್ ರಝಾ 39, ರಿಚರ್ಡ್‌ ಎನ್‌ಗಾರವ 48, ಸಲ್ಮಾನ್ ಆಘಾ 42ಕ್ಕೆ3, ಫೈಸಲ್ ಅಕ್ರಮ್ 24ಕ್ಕೆ3);

ಪಾಕಿಸ್ತಾನ: 21 ಓವರುಗಳಲ್ಲಿ 60ಕ್ಕೆ6 (ಬ್ಲೆಸಿಂಗ್ ಮುಝರಾಬಾನಿ 9ಕ್ಕೆ2, ಸಿಯಾನ್ ವಿಲಿಯಮ್ಸ್ 12ಕ್ಕೆ2, ಸಿಕಂದರ್ ರಝಾ 7ಕ್ಕೆ2). ಪಂದ್ಯದ ಆಟಗಾರ: ಸಿಕಂದರ್ ರಝಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.