ADVERTISEMENT

ಟ್ವೆಂಟಿ–20 ವಿಶ್ವಕಪ್‌ ಬಳಿಕ ನಿವೃತ್ತಿ: ಮೊಹಮ್ಮದ್‌ ಹಫೀಜ್‌

ಪಿಟಿಐ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST
ಮೊಹಮ್ಮದ್‌ ಹಫೀಜ್‌ 
ಮೊಹಮ್ಮದ್‌ ಹಫೀಜ್‌    

ಕರಾಚಿ: ‘ಆಸ್ಟ್ರೇಲಿಯಾದಲ್ಲಿ ನಡೆಯುವ ಟ್ವೆಂಟಿ–20 ವಿಶ್ವಕಪ್‌ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುತ್ತೇನೆ’ ಎಂದು ಪಾಕಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ಸೋಮವಾರ ಹೇಳಿದ್ದಾರೆ.

‘ಟ್ವೆಂಟಿ–20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಬೇಕೆಂಬುದು ನನ್ನ ಕನಸು. ನಿವೃತ್ತಿಯ ನಂತರ ಟ್ವೆಂಟಿ–20 ಲೀಗ್‌ಗಳತ್ತ ಮಾತ್ರ ಚಿತ್ತ ಹರಿಸುತ್ತೇನೆ’ ಎಂದಿದ್ದಾರೆ.

‘ಕೋಚಿಂಗ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಆಲೋಚನೆಯೂ ಇದೆ. ಮುಂದೆ ಏನಾಗಲಿದೆಯೋ ನೋಡೋಣ’ ಎಂದೂ ತಿಳಿಸಿದ್ದಾರೆ.

ADVERTISEMENT

39 ವರ್ಷ ವಯಸ್ಸಿನ ಹಫೀಜ್‌, ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಈ ಮಾದರಿಯಲ್ಲಿ 55 ಪಂದ್ಯಗಳನ್ನು ಆಡಿದ್ದಾರೆ. 218 ಏಕದಿನ ಹಾಗೂ 91 ಟ್ವೆಂಟಿ–20 ಪಂದ್ಯಗಳಲ್ಲೂ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.