ದುಬೈ: ದಕ್ಷಿಣ ಆಫ್ರಿಕಾ ಆಟಗಾರರನಿಗೆ ಜನಾಂಗೀಯ ನಿಂದನೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರ ಮೇಲೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ವಿಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಆದೇಶ ಹೊರಡಿಸಿದೆ.
ಜ.22 ರಂದು ಡರ್ಬನ್‌ನಲ್ಲಿ ನಡೆಡಿದ್ದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರ ಪಿಶುವಾಯೊ ರನ್ ಗಳಿಸುತ್ತಿದ್ದಾಗ ವಿಕೆಟ್ ಕೀಪರ್ ಸರ್ಫರಾಜ್ ‘ಏ ಕರಿಯ...’ ಎಂದು ನಿಂದಿಸಿದ್ದರು. ಸ್ಟಂಪ್‌ಗೆ ಅಳವಡಿಸಿದ್ದ ಮೈಕ್‌ನಲ್ಲಿ ಅವರ ಅವಹೇಳನಕಾರಿ ಮಾತುಗಳು ದಾಖಲಾಗಿದ್ದವು.
ಸರ್ಫರಾಜ್ ಹೇಳಿಕೆಗೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಸೇರಿದಂತೆ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕ್‌ನ ಹಲವು ಕ್ರಿಕೆಟಿಗರು ವಿಷಾದ ವ್ಯಕ್ತಪಡಿಸಿದ್ದರು.
ವಿವಾದ ಕುರಿತು ಸರ್ಫರಾಜ್ ಕೂಡ ಕ್ಷಮೆ ಕೋರಿದ್ದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.