ADVERTISEMENT

PAK vs ENG 2nd Test: ಇಂಗ್ಲೆಂಡ್ ವಿರುದ್ಧ ಪಾಕ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 13:18 IST
Last Updated 18 ಅಕ್ಟೋಬರ್ 2024, 13:18 IST
ನೊಮಾನ್ ಅಲಿ
ಎಎಫ್‌ಪಿ ಚಿತ್ರ
ನೊಮಾನ್ ಅಲಿ ಎಎಫ್‌ಪಿ ಚಿತ್ರ   

ಮುಲ್ತಾನ್‌: ಸ್ಪಿನ್ನರ್‌ ನೊಮಾನ್ ಅಲಿ (46 ಕ್ಕೆ 8) ಅವರ ಅಮೋಘ ಬೌಲಿಂಗ್‌ ನೆರವಿನಿಂದ ಪಾಕಿಸ್ತಾನ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡವನ್ನು 152 ರನ್‌ಗಳಿಂದ ಸುಲಭವಾಗಿ ಸೋಲಿಸಿತು. ಇದರಿಂದ ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಯಿತು.

ನೊಮಾನ್‌ಗೆ ಬೆಂಬಲ ನೀಡಿದ ಇನ್ನೊಬ್ಬ ಸ್ಪಿನ್ನರ್ ಸಾಜಿದ್ ಖಾನ್ 93 ರನ್ನಿಗೆ 2 ವಿಕೆಟ್ ಪಡೆದರು. ಗೆಲ್ಲಲು 297 ರನ್ ಗಳಿಸಬೇಕಾಗಿದ್ದ ಇಂಗ್ಲೆಂಡ್ (ಗುರುವಾರ: 2 ವಿಕೆಟ್‌ಗೆ 36) ಎರಡನೇ ಇನಿಂಗ್ಸ್‌ನಲ್ಲಿ 144 ರನ್‌ಗಳಿಗೆ ಆಲೌಟ್‌ ಆಯಿತು.

ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲ 20 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು. ಪಾಕ್‌ ಟೆಸ್ಟ್ ಇತಿಹಾಸದಲ್ಲಿ ಎರಡನೇ ಬಾರಿ ಸ್ಪಿನ್ನರ್‌ಗಳು ಎಲ್ಲ ವಿಕೆಟ್ ಪಡೆದಂತಾಗಿದೆ. ನೊಮಾನ್ ಅಲಿ ಪಂದ್ಯದಲ್ಲಿ 147 ರನ್ನಿಗೆ 11 ವಿಕೆಟ್‌ ಪಡೆದರೆ, ಸಾಜಿದ್‌ 204 ರನ್ನಿಗೆ 9 ವಿಕೆಟ್‌ ಪಡೆದರು.

ADVERTISEMENT

ಇದು ಪಾಕಿಸ್ತಾನಕ್ಕೆ 2021ರ ಫೆಬ್ರುವರಿ ಬಳಿಕ ಗಳಿಸಿದ ತವರಿನಲ್ಲಿ ದೊರೆತ ಮೊದಲ ಗೆಲುವಾಗಿದೆ.

ಮೊದಲ ಟೆಸ್ಟ್‌ ಅನ್ನು ಇಂಗ್ಲೆಂಡ್‌ ಇನಿಂಗ್ಸ್‌ ಅಂತರದಲ್ಲಿ ಗೆದ್ದಿತ್ತು. ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ರಾವಲ್ಪಿಂಡಿಯಲ್ಲಿ ಇದೇ 24 ರಿಂದ ನಡೆಯಲಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 366; ಇಂಗ್ಲೆಂಡ್‌: 291; ಎರಡನೇ ಇನಿಂಗ್ಸ್‌: ಪಾಕಿಸ್ತಾನ: 221; ಇಂಗ್ಲೆಂಡ್‌: 33.3 ಓವರುಗಳಲ್ಲಿ 144 (ಓಲಿ ಪೋಪ್‌ 22, ಬೆನ್‌ ಸ್ಟೋಕ್ಸ್ 37, ಬ್ರೈಡನ್ ಕಾರ್ಸ್ 27; ಸಾಜಿದ್‌ ಖಾನ್‌ 93ಕ್ಕೆ2, ನೊಮಾನ್ ಅಲಿ 46ಕ್ಕೆ8). ಪಂದ್ಯದ ಆಟಗಾರ: ಸಾಜಿದ್ ಖಾನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.