ADVERTISEMENT

ಆಟಗಾರರಿಗೆ ವೇತನ ಪಾವತಿ: ಆರೋಪ ಅಲ್ಲಗೆಳೆದ ಪಾಕಿಸ್ತಾನ ಕ್ರಿಕೆಟ್ ಕೋಚ್‌

ಏಜೆನ್ಸೀಸ್
Published 30 ಅಕ್ಟೋಬರ್ 2023, 15:51 IST
Last Updated 30 ಅಕ್ಟೋಬರ್ 2023, 15:51 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಕೋಲ್ಕತ್ತ: ತಂಡದ ಆಟಗಾರರಿಗೆ ಐದು ತಿಂಗಳಿಂದ ವೇತನ ಪಾವತಿ ಮಾಡಿಲ್ಲ ಎಂಬ ಆರೋಪಗಳನ್ನು ಪಾಕಿಸ್ತಾನ ತಂಡದ ಕೋಚ್‌ ಗ್ರಾಂಟ್‌ ಬ್ರಾಡ್‌ಬರ್ನ್ ಅವರು ಸೋಮವಾರ ತಳ್ಳಿಹಾಕಿದ್ದು, ಎಡವಿರುವ ವಿಶ್ವಕಪ್ ಅಭಿಯಾನವನ್ನು ಸರಿದಾರಿಗೆ ತರಲು ತಂಡ ದೃಢನಿಶ್ಚಯ ಮಾಡಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಈಗ ವಿಶ್ವಕಪ್‌ನಿಂದ ಹೊರಬೀಳುವ ಹಂತದಲ್ಲಿದೆ. ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆಯುವ ಪಂದ್ಯದಲ್ಲಿ ಜಯಗಳಿಸಿದಲ್ಲಿ ಕ್ಷೀಣ ಆಸೆ ಉಳಿಸಿಕೊಳ್ಳಬಹುದು.

ADVERTISEMENT

ಆಟಗಾರರಿಗೆ ವೇತನ ಪಾವತಿ ವಿಷಯದಲ್ಲಿ ವಾದ– ವಿವಾದ ಮತ್ತು ಕೇಂದ್ರೀಯ ಗುತ್ತಿಗೆ ಒಪ್ಪಂದದಲ್ಲಿ ವಿಳಂಬ ವಿಷಯಗಳು ತಂಡದ ವಿಶ್ವಕಪ್ ಅಭಿಯಾನದ ವೇಳೆ ಚರ್ಚೆಯಾಗುತ್ತಿದೆ.

ತಮಗೆ ವೇತನ ಪಾವತಿಯಾಗಿಲ್ಲ ಎಂದು ಪಾಕಿಸ್ತಾನ ತಂಡದ ಮೂವರು ಆಟಗಾರರು ಎಎಫ್‌ಪಿಗೆ ಖಚಿತಪಡಿಸಿದ್ದಾರೆ.

‘ತಂಡದ ಸುತ್ತ ಕೇಳಿಬರುತ್ತಿರುವ ಸದ್ದಿಗಿಂತ, ಪಾಕಿಸ್ತಾನ ತಂಡಕ್ಕೆ ಆಡುವುದು ಮತ್ತು ತಂಡದೊಳಗೆ ಕೆಲಸ ಮಾಡುವುದು ದೊಡ್ಡ ಅವಕಾಶ ಎಂದು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡ್‌ ಆಟಗಾರ ಬ್ರಾಡ್‌ಬರ್ನ್‌ ಹೇಳಿದರು.

‘ಗುತ್ತಿಗೆಯ ಕರಾರು ಪತ್ರಗಳನ್ನು ಭಾರತದಲ್ಲಿರುವ ಆಟಗಾರರಿಗೆ ಕಳುಹಿಸಲಾಗಿದೆ. ಆಟಗಾರರು ಸಹಿ ಹಾಕಿದ್ದಾರೆ. ಅವರಿಗೆ ವೇತನ ಪಾವತಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೇಳಿದೆ.

ಪಾಕ್ ತಂಡ, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡವನ್ನು ಸೋಲಿಸಿದ ನಂತರ ಸತತ ನಾಲ್ಕು ಪಂದ್ಯಗಳಲ್ಲಿ (ಭಾರತ, ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ) ಸೋಲನುಭವಿಸಿರುವುದು ತಂಡಕ್ಕೆ ಗಾಸಿ ಮೂಡಿಸಿದೆ ಎಂದು ಬ್ರಾಡ್‌ಬರ್ನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.