ಆಧುನಿಕ ಕ್ರಿಕೆಟ್ ಲೋಕದ ಬ್ಯಾಟಿಂಗ್ ಸೂಪರ್‌ಸ್ಟಾರ್‌ಗಳಾದವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಅವರನ್ನು ಹೊಂದಿದ್ದರೆ ಯಾವುದೇ ತಂಡ ವಿಶ್ವಕಪ್ ಗೆಲ್ಲಬಹುದು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿರುವ ಬಾಬರ್, ಸದ್ಯ ಐಸಿಸಿಯ ಏಕದಿನ ಮತ್ತು ಟಿ20 ಮಾದರಿಯರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮಾದರಿಗಳಲ್ಲಿ ಕ್ರಮವಾಗಿ 2 ಮತ್ತು 16ನೇ ಸ್ಥಾನಗಳಲ್ಲಿದ್ದಾರೆ. ಕೊಹ್ಲಿ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಮೂರೂ ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಏಕದಿನ ಮಾದರಿಯಲ್ಲಿ ಇದುವರೆಗೆ 260 ಪಂದ್ಯಗಳ 251 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್, 58.07ರ ಸರಾಸರಿಯಲ್ಲಿ12,311 ರನ್ ಗಳಿಸಿದ್ದಾರೆ. ಇದರಲ್ಲಿ43 ಶತಕ ಮತ್ತು 64 ಅರ್ಧಶತಕಗಳಿವೆ. ಬಾಬರ್, 86 ಏಕದಿನ ಪಂದ್ಯಗಳ 84 ಇನಿಂಗ್ಸ್‌ಗಳಿಂದ16 ಹಾಗೂ 18 ಅರ್ಧಶತಕ ಸಹಿತ4,261 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ59.18.
ಅಲೆಕ್ಸ್ ಹೇಳಿಕೆ ಅನುಕರಿಸಿದ ಲತೀಫ್
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನ ಮ್ಯಾನೇಜರ್ ಆಗಿದ್ದ ಸರ್ ಅಲೆಕ್ಸ್ ಫರ್ಗ್ಯೂಸನ್ ಅವರು,'ನನಗೆ 10 ಕಟ್ಟಿಗೆ ತುಂಡುಗಳು ಮತ್ತು ಜಿನೆದಿನ್ ಜಿದಾನ್ ಅವರನ್ನು ಕೊಡಿ. ಚಾಂಪಿಯನ್ಸ್ ಲೀಗ್ ಗೆದ್ದುಕೊಡುತ್ತೇನೆ' ಎಂದು ಈ ಹಿಂದೆ ಹೇಳಿದ್ದರು.
ಫ್ರಾನ್ಸ್‌ನ ಜನಪ್ರಿಯ ಫುಟ್‌ಬಾಲ್ ಆಟಗಾರ ಆಗಿರುವ ಜಿದಾನೆ, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಸೇರಿದಂತೆ ಹಲವು ಕ್ಲಬ್‌ಗಳ ಪರ ಆಡಿದ್ದರು.
ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಲತೀಫ್,ಅಲೆಕ್ಸ್ ಅವರ ಹೇಳಿಕೆಯನ್ನು ಕ್ರಿಕೆಟ್‌ಗೆ ಅನ್ವಯಿಸಿಕೊಂಡಿದ್ದಾರೆ. 'ನನಗೆ ಬಾಬರ್ ಅಜಂ, ವಿರಾಟ್ ಕೊಹ್ಲಿ ಮತ್ತು 9ಕಟ್ಟಿಗೆ ತುಂಡುಗಳನ್ನು ಕೊಡಿ. ವಿಶ್ವಕಪ್ ಗೆದ್ದುಕೊಡುತ್ತೇನೆ' ಎಂದಿದ್ದಾರೆ.
ಲತೀಫ್ ತಾವು ಮಾತನಾಡಿರುವವಿಡಿಯೊವನ್ನು ತಮ್ಮ ಟ್ವಿಟರ್ ಪುಟದಲ್ಲಿಯೂ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.