ADVERTISEMENT

ಭಾರತ ಜೊತೆ ಕ್ರಿಕೆಟ್ ಆಡುವುದನ್ನು ಪಾಕಿಸ್ತಾನ ನಿಲ್ಲಿಸಲಿ: ರಶೀದ್ ಲತೀಫ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 15:54 IST
Last Updated 13 ನವೆಂಬರ್ 2024, 15:54 IST
ರಶೀದ್ ಲತೀಫ್
ರಶೀದ್ ಲತೀಫ್   

ನವದೆಹಲಿ: ತಮಗೆ ಅಧಿಕಾರ ಇದ್ದಿದ್ದರೆ ಪಾಕಿಸ್ತಾನ ತಂಡಕ್ಕೆ ಯಾವುದೇ ಟೂರ್ನಿಯಲ್ಲಿ ಭಾರತದ ಜೊತೆ ಆಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಪಾಕ್ ತಂಡದ ಮಾಜಿ ವಿಕೆಟ್‌ ಕೀಪರ್–ಬ್ಯಾಟರ್‌ ರಶೀದ್ ಲತೀಫ್ ಹೇಳಿದ್ದಾರೆ.

ಉಭಯ ದೇಶಗಳು ತಮ್ಮೊಳಗಿನ ವೈಮನಸ್ಸನ್ನು ಸರಿಪಡಿಸುವವರೆಗೆ ಉಭಯ ತಂಡಗಳಿಗೆ ಐಸಿಸಿಯು ಯಾವುದೇ ಜಾಗತಿಕ ಕ್ರಿಕೆಟ್‌ ಟೂರ್ನಿಗಳ ಆತಿಥ್ಯ ವಹಿಸಬಾರದು ಎಂದೂ ಸಲಹೆ ನೀಡಿದ್ದಾರೆ.

ಮುಂದಿನ ಫೆಬ್ರುವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಭಾರತ ನಿರಾಕರಿಸಿದೆ. ಈಗ ಇಡೀ ಟೂರ್ನಿಯ ಆತಿಥ್ಯ ಬೇರೊಂದು ದೇಶದ ಪಾಲಾಗಬಹುದು ಎಂಬ ವದಂತಿ ಹರಡಿದೆ.

ADVERTISEMENT

ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ತನ್ನ ಅಸಮರ್ಥತೆಯನ್ನು ಬಿಸಿಸಿಐ ಲಿಖಿತವಾಗಿ ದೃಢಪಡಿಸಬೇಕು ಎಂದು ಪಾಕಿಸ್ತಾವು ಐಸಿಸಿಗೆ ಪತ್ರ ಬರೆದಿದೆ.

ಈ ಹಿಂದೆ ಶ್ರೀಲಂಕಾ (2023ರಲ್ಲಿ) ಮತ್ತು ಜಿಂಬಾಬ್ವೆ ವಿರುದ್ಧ (2019ರಲ್ಲಿ) ನಿಷೇಧ ಹೇರಿದ್ದ ಐಸಿಸಿ, ಭಾರತದ ಜೊತೆ ಮೃದುವಾಗಿ ವರ್ತಿಸುತ್ತಿದೆ ಎಂದಿದ್ದಾರೆ. ಕ್ರಿಕೆಟ್‌ ಸಂಸ್ಥೆಯ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಐಸಿಸಿ ಲಂಕಾ ಕ್ರಿಕೆಟ್‌ ಮಂಡಳಿ ವಿರುದ್ಧ 2023ರ ನವೆಂಬರ್‌ನಲ್ಲಿ ಅಮಾನತು ಹೇರಿತ್ತು. ಅದನ್ನು ಈ ವರ್ಷದ ಜನವರಿಯಲ್ಲಿ ತೆರವುಗೊಳಿಸಲಾಗಿತ್ತು.

ಲತೀಫ್‌ ಅವರು 37 ಟೆಸ್ಟ್‌ ಮತ್ತು 166 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.