ಪರ್ತ್, ಆಸ್ಟ್ರೇಲಿಯಾ: ಸಾಂಘಿಕ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡವು ಭಾನುವಾರ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿತು. ಈ ಮೂಲಕ ಪ್ರವಾಸಿ ತಂಡವು 22 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದಿತು.
ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೆ, ನಂತರದ ಎರಡು ಪಂದ್ಯಗಳನ್ನು ಪಾಕಿಸ್ತಾನ ಗೆದ್ದು 2–1ರಿಂದ ಸರಣಿಯನ್ನು ವಶಮಾಡಿಕೊಂಡಿತು. 2002ರಲ್ಲಿ ಪಾಕಿಸ್ತಾನವು ಕೊನೆಯ ಬಾರಿ ಏಕದಿನ ಸರಣಿಯನ್ನು ಜಯಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ತಂಡವು, ಶಾಹೀನ್ ಶಾ ಅಫ್ರಿದಿ, ನಸೀಂ ಶಾ ಮತ್ತು ಹ್ಯಾರಿಸ್ ರವೂಫ್ ದಾಳಿಗೆ ತತ್ತರಿಸಿತು. ಹೀಗಾಗಿ 31.5 ಓವರ್‌ಗಳಲ್ಲಿ 140 ರನ್‌ಗಳಿಗೆ ಕುಸಿಯಿತು. 30 ರನ್ ಗಳಿಸಿದ ಸೀನ್ ಅಬಾಟ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶಾಹೀನ್ ಮತ್ತು ನಸೀಂ ತಲಾ ಮೂರು ವಿಕೆಟ್ ಪಡೆದರೆ, ಹ್ಯಾರಿಸ್ ಎರಡು ವಿಕೆಟ್ ಗಳಿಸಿದರು.
ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭಿಕ ಆಟಗಾರರಾದ ಸೈಮ್ ಅಯೂಬ್ (42;52ಎ) ಮತ್ತು ಅಬ್ದುಲ್ಲಾ ಶಫೀಕ್ (37;53ಎ) ಅವರ ಬ್ಯಾಟಿಂಗ್ ನೆರವಿನಿಂದ 26.5 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 143 ರನ್ ಗಳಿಸಿ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 31.5 ಓವರ್‌ಗಳಲ್ಲಿ 140 (ಸೀನ್ ಅಬಾಟ್ 30, ಮ್ಯಾಥ್ಯೂ ಶಾರ್ಟ್ 22; ಶಾಹೀನ್ ಶಾ ಅಫ್ರಿದಿ 32ಕ್ಕೆ 3, ನಸೀಂ ಶಾ 54ಕ್ಕೆ 3, ಹ್ಯಾರಿಸ್ ರವೂಫ್ 24ಕ್ಕೆ 2). ಪಾಕಿಸ್ತಾನ: 26.5 ಓವರ್‌ಗಳಲ್ಲಿ 2 ವಿಕೆಟ್‌ಗೆ 143 (ಸೈಮ್ ಅಯೂಬ್ 42, ಅಬ್ದುಲ್ಲಾ ಶಫೀಕ್ 37, ಬಾಬರ್ ಅಜಂ ಔಟಾಗದೇ 28, ಮೊಹಮ್ಮದ್ ರಿಜ್ವಾನ್ ಔಟಾಗದೇ 30; ಲ್ಯಾನ್ಸ್ ಮೋರಿಸ್ 24ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಮತ್ತು ಸರಣಿಯ ಆಟಗಾರ: ಹ್ಯಾರಿಸ್ ರವೂಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.