ಅಂತರರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಪಾಕಿಸ್ತಾನದ ಮೊಹಮ್ಮದ್ ಆಮಿರ್, ಭಾರತದ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು 'ಈ ಕಾಲಘಟ್ಟದ ಶ್ರೇಷ್ಠ ಬ್ಯಾಟರ್' ಎಂದು ಹೊಗಳಿದ್ದಾರೆ. ಆದರೆ, ಯಾವ ಬ್ಯಾಟರ್‌ಗೆ ಬೌಲಿಂಗ್ ಮಾಡುವುದು ಕಠಿಣ ಎಂಬ ಪ್ರಶ್ನೆಗೆ ಬೇರೊಬ್ಬ ಆಟಗಾರನ ಹೆಸರನ್ನು ಉಲ್ಲೇಖಿಸಿದ್ದಾರೆ.
ಜೀ ನ್ಯೂಸ್ ಜೊತೆಗೆ ಮಾತನಾಡಿರುವ ಆಮಿರ್, 'ನನ್ನ ಪ್ರಕಾರ ಈ ಕಾಲಘಟ್ಟದ ಅತ್ಯಂತಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ. ಆದಾಗ್ಯೂ ಅವರಿಗೆ ಬೌಲಿಂಗ್ ಮಾಡುವುದು ನನಗೇನೂ ಕಠಿಣವೆನಿಸಿಲ್ಲ. ಆದರೆ, ಬೌಲಿಂಗ್ ಮಾಡಲು ಕಠಿಣವಾದ ಬ್ಯಾಟರ್ಸ್ಟೀವ್ ಸ್ಮಿತ್ ಎಂದು ವೈಯಕ್ತಿಕವಾಗಿ ನನಗನಿಸುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಡಗೈ ವೇಗಿಯಾಗಿರುವ ಆಮಿರ್,ಸ್ಮಿತ್‌ಗೆ ಬೌಲಿಂಗ್ ಮಾಡುವುದು ಏಕೆ ಕಠಿಣ ಎಂದೂ ವಿವರಿಸಿದ್ದಾರೆ.
'ನಾನು 2009ರಲ್ಲಿ ಆಡಿದಾಗ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶೇನ್ ವಾಟ್ಸನ್‌ಗೆ ಬೌಲಿಂಗ್ ಮಾಡುವುದು ಕಠಿಣವೆನಿಸಿತ್ತು. ಆದರೆ ಈಗ ಸ್ಟೀವ್ ಸ್ಮಿತ್ ಕಠಿಣ ಬ್ಯಾಟರ್ ಎನಿಸುತ್ತದೆ. ಏಕೆಂದರೆ, ಸ್ಮಿತ್ ಹೇಗೆ ಬ್ಯಾಟ್ ಬೀಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ನಾನು ಅವರಿಗೆ ಔಟ್‌ಸೈಡ್‌ನತ್ತ (ವೈಡ್ ಕ್ರೀಸ್‌ನತ್ತ) ಬೌಲಿಂಗ್ ಮಾಡಿದರೆ, ಅದನ್ನು ಅವರು ಲೆಗ್‌ಸೈಡ್‌ನತ್ತ ಬಾರಿಸಬಲ್ಲರು. ನಾನು ಅವರ ಲೆಗ್‌ಸೈಡ್‌ನತ್ತ ಬೌಲ್ ಮಾಡಿದರೆ, ಜಾಗ ಮಾಡಿಕೊಂಡು ಕವರ್ಸ್‌ನತ್ತ ಡ್ರೈವ್ ಮಾಡಬಲ್ಲರು' ಎಂದು ನಗುತ್ತಲೇ ಉತ್ತರಿಸಿದ್ದಾರೆ.
ಮುಂದುವರಿದು, 'ನಿಜವಾಗಿಯೂ ಸ್ಮಿತ್ ಹೇಗೆ ಬ್ಯಾಟ್ ಮಾಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡಿದ್ದೇನೆ' ಎಂದೂ ಹೇಳಿಕೊಂಡಿದ್ದಾರೆ.
ಅಂದಹಾಗೆಕೊಹ್ಲಿ ಮತ್ತು ಆಮಿರ್ ಕೊನೆಯ ಸಲ ಮುಖಾಮುಖಿಯಾಗಿದ್ದು2019ರ ಏಕದಿನ ವಿಶ್ವಕಪ್‌ನಲ್ಲಿ.
ಕ್ರಿಕ್ ಮೆಟ್ರಿಕ್ ವೆಬ್‌ಸೈಟ್ ಮಾಹಿತಿ ಪ್ರಕಾರ, ಏಕದಿನ ಕ್ರಿಕೆಟ್‌ನಲ್ಲಿಅಮಿರ್ ಅವರ 41 ಎಸೆತ ಎದುರಿಸಿರುವ ಕೊಹ್ಲಿ 40 ರನ್ ಗಳಿಸಿ, ಎರಡು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಟಿ20ಯಲ್ಲಿ19 ಎಸೆತಗಳನ್ನು ಎದುರಿಸಿಒಮ್ಮೆಯೂ ಔಟಾಗದೆ 16 ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.