ಮುಂಬೈ: ಭಾರತ ತಂಡದ ಮಾಜಿ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಮರಳಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ 52 ವರ್ಷ ವಯಸ್ಸಿನ ಮಾಂಬ್ರೆ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಮತ್ತು ಹೆಡ್ ಕೋಚ್ ಮಹೇಲ ಜಯವರ್ಧನ ಅವರೊಂದಿಗೆ ಈ ಹೊಣೆ ವಹಿಸುವರು. ಜಯವರ್ಧನೆ ಕೂಡ ಎರಡು ವರ್ಷಗಳ ನಂತರ ಮತ್ತೆ ಹೆಡ್ ಕೋಚ್ ಆಗಿ ಮರಳಿದ್ದಾರೆ. ಮಾಂಬ್ರೆ ಈ ಹಿಂದೆ 2013ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆದಾಗ ಬೌಲಿಂಗ್ ಕೋಚ್ ಆಗಿದ್ದರು.
ಪಾರಸ್ ಈ ಮೊದಲು ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದು ಜೂನ್‌ನ ಟಿ20 ವಿಶ್ವಕಪ್‌ವರೆಗೆ
ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.