ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್ ಕೀಪರ್–ಬ್ಯಾಟರ್ ಪಾರ್ಥಿವ್ ಪಟೇಲ್ ಅವರಿಗೆ ಮುಂಬರುವ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡ ಎರಡು ಹೊಣೆಗಳನ್ನು ನೀಡಿದೆ. ಅವರು ತಂಡದ ಸಹಾಯಕ ಕೋಚ್ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫ್ರ್ಯಾಂಚೈಸಿ ಬುಧವಾರ ತಿಳಿಸಿದೆ.
ಆಶಿಶ್ ನೆಹ್ರಾ ಅವರು ಟೈಟನ್ಸ್ನ ಹೆಡ್ ಕೋಚ್ ಆಗಿದ್ದಾರೆ. ಪಾರ್ಥಿವ್ ಅವರಿಗೆ ಐಪಿಎಲ್ನಲ್ಲಿ ಇದು ಮೊದಲ ಕೋಚಿಂಗ್ ಜವಾಬ್ದಾರಿಯಾಗಿದೆ. ನಿವೃತ್ತಿ ನಂತರ ಪಾರ್ಥಿವ್ ಅವರು ಮುಂಬೈ ಇಂಡಿಯನ್ಸ್ ಪ್ರತಿಭಾ ಶೋಧದ ಜವಾಬ್ದಾರಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.