ADVERTISEMENT

IPL 2024: ಪಂಜಾಬ್‌ಗೆ 193 ರನ್ ಗುರಿ ನೀಡಿದ ಮುಂಬೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2024, 14:14 IST
Last Updated 18 ಏಪ್ರಿಲ್ 2024, 14:14 IST
<div class="paragraphs"><p>ಮೊಹಾಲಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್‌ ಸಂದರ್ಭದಲ್ಲಿ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಹಾಗೂ ಪಂಜಾಬ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರನ್ </p></div>

ಮೊಹಾಲಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್‌ ಸಂದರ್ಭದಲ್ಲಿ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ಹಾಗೂ ಪಂಜಾಬ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರನ್

   

ಪಿಟಿಐ ಚಿತ್ರ

ಮೊಹಾಲಿ: ಇಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿದೆ.

ADVERTISEMENT

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರು 53 ಎಸೆತಗಳಲ್ಲಿ ಸಿಡಿಸಿದ 76 ರನ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತಕ್ಕೆ ಕಲೆ ಹಾಕಿತು. ಅವರ ಈ ಸ್ಫೋಟಕ ಬ್ಯಾಟಿಂಗ್‌ನಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳಿದ್ದವು.

ಉಳಿದಂತೆ ರೋಹಿತ್ ಶರ್ಮಾ 36, ತಿಲಕ್ ವರ್ಮಾ 34 ರನ್ ಸಿಡಿಸಿದರು.

ಅಂತಿಮ ಓವರ್‌ನಲ್ಲಿ 3 ವಿಕೆಟ್ ಉರುಳಿಸಿದ ಹರ್ಷಲ್ ಪಟೇಲ್ ಮುಂಬೈ ತಂಡ 200ರ ಗಡಿ ದಾಟುವುದನ್ನು ತಡೆದರು. ಹರ್ಷಲ್ ಪಟೇಲ್ 31 ರನ್‌ಗೆ 3 ವಿಕೆಟ್ ಉರುಳಿಸಿದರು. ಸ್ಯಾಮ್ ಕರನ್ 2 ವಿಕೆಟ್ ಪಡೆದರು.

ಅಂಕಪಟ್ಟಿಯಲ್ಲಿ ಉಭಯ ತಂಡಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ‘ಸಮಬಲ’ ಸಾಧಿಸಿವೆ. ತಲಾ ಆರು ಪಂದ್ಯಗಳನ್ನಾಡಿ ಎರಡರಲ್ಲಿ ಜಯಿಸಿ, ನಾಲ್ಕರಲ್ಲಿ ಸೋತಿವೆ. ನೆಟ್‌ ರನ್‌ರೇಟ್‌ನಲ್ಲಿ ತುಸು ಉತ್ತಮವಾಗಿರುವುದರಿಂದ ಪಂಜಾಬ್ (-0.218) ಏಳನೇ ಸ್ಥಾನದಲ್ಲಿದೆ. ಮುಂಬೈ (-0.234) ಅದರ ನಂತರದ ಸ್ದಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.