ADVERTISEMENT

ICC World Cup: ಭಾರತಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಪಾಕ್ ಪ್ರಧಾನಿಗೆ ಪಿಸಿಬಿ ಪತ್ರ

ಪಿಟಿಐ
Published 3 ಜುಲೈ 2023, 11:03 IST
Last Updated 3 ಜುಲೈ 2023, 11:03 IST
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ    

ನವದೆಹಲಿ: ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಾಗಿ  ಭಾರತಕ್ಕೆ ಪ್ರಯಾಣಿಸಲು ಅಧಿಕೃತ ಅನುಮತಿ ಕೋರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ), ಪ್ರಧಾನಿ ಶೆಹಬಾಜ್ ಷರೀಫ್‌ ಅವರಿಗೆ ಪತ್ರ ಬರೆದಿದೆ ಎಂದು ವರದಿಯೊಂದು ತಿಳಿಸಿದೆ.

‘ಪಾಕಿಸ್ತಾನ ತಂಡವು ಭಾರತಕ್ಕೆ ತೆರಳಲು ಅವಕಾಶ ಇದೆಯೇ? ಅವಕಾಶ ಇದೆಯಾದರೆ, ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ಪಂದ್ಯಗಳಿಗೆ ನಿಗದಿಪಡಿಸಿರುವ ಐದು ತಾಣಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪ ಇದೆಯೇ‘ ಎಂಬ ಮಾಹಿತಿಯನ್ನು ಪಿಸಿಬಿ ಪತ್ರದಲ್ಲಿ ಕೇಳಿರುವುದಾಗಿ ‘ಇಎಸ್‌ಪಿಎನ್‌ಕ್ರಿಕ್‌ಇನ್ಫೊ’ ವರದಿ ಮಾಡಿದೆ.

‘ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆಯಾದ ಕೂಡಲೇ ನಾವು ಅನುಮತಿ ಕೋರಿ ಪ್ರಧಾನಿ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ’ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.