ADVERTISEMENT

BAN vs NZ: ಗ್ಲೆನ್ ಫಿಲಿಪ್ಸ್ ಮೋಡಿ; ಹಸನ್ ಜಾಯ್ ತಾಳ್ಮೆಯ ಬ್ಯಾಟಿಂಗ್

ಪಿಟಿಐ
Published 28 ನವೆಂಬರ್ 2023, 14:36 IST
Last Updated 28 ನವೆಂಬರ್ 2023, 14:36 IST
<div class="paragraphs"><p>ನ್ಯೂಜಿಲೆಂಡ್ ತಂಡದ ಆಟಗಾರರು</p></div>

ನ್ಯೂಜಿಲೆಂಡ್ ತಂಡದ ಆಟಗಾರರು

   

(ಚಿತ್ರ ಕೃಪೆ: X/@BLACKCAPS)

ಸಿಲೆಟ್, ಬಾಂಗ್ಲಾದೇಶ: ಕಿವೀಸ್ ಬಳಗದ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಮೋಡಿ ಮತ್ತು ಬಾಂಗ್ಲಾದ ಆರಂಭಿಕ ಬ್ಯಾಟರ್ ಮೆಹಮುದುಲ್ ಹಸನ್ ಜಾಯ್ ಅವರ ತಾಳ್ಮೆಯ ಬ್ಯಾಟಿಂಗ್‌ಗೆ ಮಂಗಳವಾರ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವು ವೇದಿಕೆಯಾಯಿತು.

ADVERTISEMENT

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ತಂಡದ  ಫಿಲಿಪ್ಸ್ (53ಕ್ಕೆ4) ಅವರ ಪರಿಣಾಮಕಾರಿ ದಾಳಿಯ ಮುಂದೆ ಬಾಂಗ್ಲಾ ತಂಡದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಆರಂಭಿಕ ಬ್ಯಾಟರ್ ಮೆಹಮುದುಲ್ (86; 166ಎ, 4X11) ಅವರೊಬ್ಬರ ಏಕಾಂಗಿ ಹೋರಾಟದಿಂದ ತಂಡವು 85 ಓವರ್‌ಗಳಲ್ಲಿ 9 ವಿಕೆಟ್‌ಗಳಿಎ 310 ರನ್ ಗಳಿಸಿತು. ಮಂದಬೆಳಕಿನಿಂದಾಗಿ ದಿನದಾಟ ಸ್ಥಗಿತವಾಯಿತು.

ಬಾಂಗ್ಲಾ ತಂಡದ ನಯಕ ನಜ್ಮುಲ್ ಹಸನ್ ಶಾಂತೊ (37; 35ಎ) ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದರು. ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದರು. ಉಳಿದ ಬ್ಯಾಟರ್‌ಗಳು ಗಳಿಸಿದ ಸಣ್ಣ ಸಣ್ಣ ಮೊತ್ತಗಳಿಂದಾಗಿ ತಂಡವು ಮುನ್ನೂರರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 85 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 310 (ಮೆಹಮುದುಲ್ ಹಸನ್ ಜಾಯ್ 86, ನಜ್ಮುಲ್ ಹುಸೇನ್ ಶಾಂತೊ 37, ಮೊಮಿನುಲ್ ಹಕ್ 37, ಶಹಾದತ್ ಹುಸೇನ್ 24, ಮೆಹದಿ ಹಸನ್ ಮಿರಾಜ್ 20, ನೂರುಲ್ ಹಸನ್ 29, ಕೈಲ್ ಜೆಮಿಸನ್ 52ಕ್ಕೆ2, ಎಜಾಜ್ ಪಟೇಲ್ 76ಕ್ಕೆ2, ಗ್ಲೆನ್ ಫಿಲಿಪ್ಸ್ 53ಕ್ಕೆ4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.