ADVERTISEMENT

T20 WC ಜಯದ ಬಳಿಕ ಟೀಮ್ ಇಂಡಿಯಾ ಆಟಗಾರರ ಜೊತೆ ಮಾತನಾಡಿದ ಪ್ರಧಾನಿ ಮೋದಿ

ಪಿಟಿಐ
Published 30 ಜೂನ್ 2024, 5:57 IST
Last Updated 30 ಜೂನ್ 2024, 5:57 IST
<div class="paragraphs"><p>ಟಿ-20 ವಿಶ್ವಕಪ್ ಜಯದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ</p></div>

ಟಿ-20 ವಿಶ್ವಕಪ್ ಜಯದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ

   

ಪಿಟಿಐ ಚಿತ್ರ

ನವದೆಹಲಿ: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟಿ–20 ವಿಶ್ವಕಪ್ ಎತ್ತಿ ಹಿಡಿದ ಟೀಮ್ ಇಂಡಿಯಾ ಆಟಗಾರರಿಗೆ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ADVERTISEMENT

ರೋಹಿತ್ ಶರ್ಮಾ ಅವರಿಗೆ ಕರೆ ಮಾಡಿದ್ದ ಮೋದಿ, ಅವರ ಅದ್ಭುತ ನಾಯಕತ್ವ ಮತ್ತು ವಿಶ್ವಕಪ್ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಸಮಯೋಚಿತ ಆಟ ಮತ್ತು ಅವರು ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನು ಮೋದಿ ಶ್ಲಾಘಿಸಿದ್ದಾರೆ.

ಈ ಇಬ್ಬರೂ ದಿಗ್ಗಜ ಕ್ರಿಕೆಟಿಗರು ವಿಶ್ವಕಪ್ ಗೆದ್ದ ಕೂಡಲೇ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಅಲ್ಲದೆ, ಪಂದ್ಯಕ್ಕೆ ಪಂದ್ಯಕ್ಕೆ ತಿರುವು ಕೊಟ್ಟ ಕ್ಲಾಸೆನ್ ವಿಕೆಟ್ ಮತ್ತು ಅಂತಿಮ ಓವರ್‌ನಲ್ಲಿ ಪ್ರದರ್ಶಿಸಿದ ಶಿಸ್ತಿನ ಬೌಲಿಂಗ್ ದಾಳಿಗೆ ಹಾರ್ದಿಕ್ ಪಾಂಡ್ಯ ಹಾಗೂ ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ ಹಿಡಿದ ಸೂರ್ಯ ಕುಮಾರ್ ಯಾದವ್ ಅವರನ್ನು ಮೋದಿ ಕೊಂಡಾಡಿದ್ದಾರೆ. ಅಲ್ಲದೆ, ಜಸ್‌ಪ್ರೀತ್ ಬೂಮ್ರಾ ಅವರ ಕರಾರುವಾಕ್ ಬೌಲಿಂಗ್ ಬಗ್ಗೆಯೂ ಮೋದಿ ಮನತುಂಬಿ ಮಾತನಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟಗಾರರ ಜೊತೆ ಕೋಚ್ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ರಾಹುಲ್ ದ್ರಾವಿಡ್ ಅವರ ಸ್ಮರಣೀಯ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.