ಚೆಮ್ಸ್‌ಫೋರ್ಡ್: ಭಾರತ ಮತ್ತು ಎಸ್ಸೆಕ್ಸ್ ನಡುವಣ ಇಲ್ಲಿ ನಡೆದ ಅಭ್ಯಾಸ ಕ್ರಿಕೆಟ್ ಪಂದ್ಯವು ಶುಕ್ರವಾರ ಡ್ರಾ ಆಯಿತು.
ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 395 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು ಶುಕ್ರವಾರ 8 ವಿಕೆಟ್‌ಗಳ ನಷ್ಟಕ್ಕೆ 359 ರನ್ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು 21.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 89 ರನ್‌ಗಳನ್ನು ಗಳಿಸಿತು.
ಆಭ್ಯಾಸ ಪಂದ್ಯವು ನಾಲ್ಕು ದಿನಗಳವರೆಗೆ ನಡೆಯಬೇಕಿತ್ತು. ಆದರೆ ಬಿಸಿಲಿನ ತಾಪ ಹೆಚ್ಚಿದ್ದ ಕಾರಣ ಮೂರು ದಿನಗಳಿಗೆ ಇಳಿಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಆಗಸ್ಟ್ 1ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರು: ಭಾರತ: ಮೊದಲ ಇನಿಂಗ್ಸ್ 395: ಎಸ್ಸೆಕ್ಸ್: 94 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 359 ಡಿಕ್ಲೆರ್ಡ್ ( ಆಸ್ ನೀಲ್ಗರ್ 29, ಫಿನ್ ಖುಶಿ 14, ಉಮೇಶ್ ಯಾದವ್ 35ಕ್ಕೆ4, ಇಶಾಂತ್ ಶರ್ಮಾ 59ಕ್ಕೆ3, ಶಾರ್ದೂಲ್ ಠಾಕೂರ್ 58ಕ್ಕೆ1),
ಎರಡನೇ ಇನಿಂಗ್ಸ್: ಭಾರತ: 21.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 89 (ಕೆ.ಎಲ್. ರಾಹುಲ್ 36, ಚೇತೇಶ್ವರ್ ಪೂಜಾರ 23, ಅಜಿಂಕ್ಯ ರಹಾನೆ 19, ಮ್ಯಾಥ್ಯೂ ಕ್ವಿನ್ 5ಕ್ಕೆ1, ಪಾಲ್ ವಾಲ್ಟರ್ 38ಕ್ಕೆ1)
ಫಲಿತಾಂಶ: ಪಂದ್ರ ಡ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.