ADVERTISEMENT

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ: ಪ್ರಖರ್ ಅಜೇಯ ಶತಕ, ಕರ್ನಾಟಕ ಮೇಲುಗೈ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:13 IST
Last Updated 28 ಅಕ್ಟೋಬರ್ 2024, 16:13 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಖರ್ ಚತುವೇದಿ ಅವರ ಅಜೇಯ ಶತಕದ (108*, 226ಎ, 4x11, 6x2) ನೆರವಿನಿಂದ ಕರ್ನಾಟಕ ತಂಡ, ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯತ್ತ ಹೆಜ್ಜೆಯಿಟ್ಟಿದೆ.

ADVERTISEMENT

ಮಹಾರಾಷ್ಟ್ರದ 263 ರನ್‌ಗಳಿಗೆ ಉತ್ತರವಾಗಿ ಕರ್ನಾಟಕ ನಾಲ್ಕು ದಿನಗಳ ಈ ಪಂದ್ಯದ ಎರಡನೇ ದಿನವಾದ ಸೋಮವಾರ ಆಟ ಮುಗಿದಾಗ 81 ಓವರುಗಳಲ್ಲಿ 5 ವಿಕೆಟ್‌ಗೆ 242 ರನ್ ಗಳಿಸಿದೆ.

ಆರಂಭ ಆಟಗಾರರಾದ ಚತುರ್ವೇದಿ ಮತ್ತು ಮೆಕ್ನೀಲ್ ನೊರೊನಾ (57, 109ಎ) ಮೊದಲ ವಿಕೆಟ್‌ಗೆ 122 ರನ್‌ಗಳ ಜೊತೆಯಾಟವಾಡಿದರು.  ಆದರೆ ಮುಂದಿನ 14 ರನ್ ಸೇರುವಷ್ಟರಲ್ಲಿ ವಿಶಾಲ್ ಓನತ್ (7) ಮತ್ತು ನಾಯಕ ಅನೀಶ್ವರ ಗೌತಮ್ (1) ಬೇಗ ನಿರ್ಗಮಿಸಿದರು.

ಆದರೆ ಚತುರ್ವೇದಿ ಜೊತೆಗೂಡಿದ ಹರ್ಷಿಲ್ ದರ್ಮಾನಿ (36) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಸೇರಿಸಿದ್ದರಿಂತ ತಂಡ ಚೇತರಿಸಿತು. ನಂತರ ಚತುರ್ವೇದಿ, ಧ್ರುವ್ ಪ್ರಭಾಕರ್ ಅವರೊಂದಿಗೆ 22 ರನ್ ಜೊತೆಯಾಟವಾಡಿದ್ದರಿಂದ ತಂಡ ಮುನ್ನಡೆಯತ್ತ ಕಾಲಿಟ್ಟಿತು.

ಇದಕ್ಕೆ ಮೊದಲು ವಿಕಿ ಓಸ್ಟ್ವಾಲ್ 81 ರನ್ನಿಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಮಹಾರಾಷ್ಟ್ರ 93.1 ಓವರುಗಳಲ್ಲಿ 263 (ಎ.ಎಸ್‌.ನಲವಡೆ 42, ದಿಗ್ವಿಜಯ ಪಾಟೀಲ್ 39, ಕೌಶಲ್ ಎಸ್‌.ತಾಂಬೆ 32, ಎ.ಎ.ಪವಾರ್‌ 47, ವಿಕಿ ಒಸ್ವ್ಟಾಲ್ 64, ಧನುಷ್‌ ಗೌಡ 38ಕ್ಕೆ2, ಯಶೋವರ್ಧನ ಪರಂತಾಪ್ 50ಕ್ಕೆ4, ಶಶಿ ಕುಮಾರ್‌ ಕೆ. 75ಕ್ಕೆ3); ಕರ್ನಾಟಕ: 81 ಓವರುಗಳಲ್ಲಿ 5 ವಿಕೆಟ್‌ಗೆ 242 (ಮೆಕ್ನೀಲ್ ನೊರೊನಾ 57, ಪ್ರಖರ್ ಚತುರ್ವೇದಿ ಬ್ಯಾಟಿಂಗ್ 108, ಹರ್ಷಿಲ್ ಧರ್ಮಾನಿ 36; ವಿಕಿ ಒಸ್ಟ್ವಾಲ್ 81ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.