ದುಬೈ: ಐಸಿಸಿ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕರ ಅವಧಿಯಲ್ಲಿ ಬದಲಾವಣೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್ ಉದ್ದೇಶಿಸಿದ್ದು, ಮೂರು ವರ್ಷಗಳ ಎರಡು ಅವಧಿಗೆ ಶಿಫಾರಸು ಮಾಡಿದೆ. ಇದು ಜಾರಿಯಾದಲ್ಲಿ ಹಾಲಿ ತಲಾ ಎರಡು ವರ್ಷಗಳ ಮೂರು ಅವಧಿಯ ನಿಯಮ ಬದಲಾಗಲಿದೆ.
ಈ ಶಿಫಾರಸಿಗೆ ಸದಸ್ಯರು ಸಮ್ಮತಿ ನೀಡಿದಲ್ಲಿ, ಡಿಸೆಂಬರ್ 1ರಂದು ಅಧ್ಯಕ್ಷರಾಗಿ ವಹಿಸಲಿರುವ ಜಯ್ ಶಾ ಅವರಿಗೆ ಮೂರು ವರ್ಷಗಳ ಅಧಿಕಾರದ ಅವಧಿ ದೊರೆಯಲಿದೆ. ಅವರು ಬಯಸಿದಲ್ಲಿ ಮಂಡಳಿ ಸಮ್ಮತಿಯೊಡನೆ ಅವರು ಮೂರು ವರ್ಷಗಳ ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶವಿದೆ.
ಶಿಫಾರಸು ಜಾರಿಯಾದರೆ ಶಾ ಅವರ ಮೊದಲ ಅವಧಿಯ ಬಹುಪಾಲು ಬಿಸಿಸಿಐನಲ್ಲಿ ಅವರ ಮೂರು ವರ್ಷಗಳ ‘ಕೂಲಿಂಗ್ ಆಫ್’ ಅವಧಿಯನ್ನು ಒಳಗೊಳ್ಳಲಿದೆ. ಅದು 2025ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.
ಬಿಸಿಸಿಐ ಅಥವಾ ಅದರ ರಾಜ್ಯ ಘಟಕದಲ್ಲಿ ಸತತ ಆರು ವರ್ಷಗಳ ಕಾಲ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಂತರ ಮೂರು ವರ್ಷಗಳ ‘ಕೂಲಿಂಗ್ ಆಫ್’ ಅವಧಿ ಕಡ್ಡಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.