ADVERTISEMENT

ನಿಧಾನಗತಿಯ ಬೌಲಿಂಗ್; ಲಖನೌ ನಾಯಕ ಕೆ.ಎಲ್. ರಾಹುಲ್‌ಗೆ ₹24 ಲಕ್ಷ ದಂಡ

ಪಿಟಿಐ
Published 25 ಏಪ್ರಿಲ್ 2022, 10:06 IST
Last Updated 25 ಏಪ್ರಿಲ್ 2022, 10:06 IST
   

ಮುಂಬೈ: ನಿಧಾನಗತಿಯ ಬೌಲಿಂಗ್‌ಗಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೇಲೆ ₹24 ಲಕ್ಷ ದಂಡ ವಿಧಿಸಲಾಗಿದೆ.

ತಂಡದ ಉಳಿದೆಲ್ಲ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ಹೇರಲಾಗಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.

ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಲೋ ಓವರ್‌ರೇಟ್‌ಗೆ ಸಂಬಂಧಿಸಿದಂತೆ ರಾಹುಲ್ ದಂಡನೆಗೆ ಒಳಗಾಗಿದ್ದಾರೆ.

ರಾಹುಲ್ ಎರಡನೇ ಬಾರಿಗೆ ಐಪಿಎಲ್ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ₹24 ಲಕ್ಷ ದಂಡ ಹೇರಲಾಗಿದೆ. ಮೊದಲ ಬಾರಿ ಇದೇ ತಪ್ಪಿಗಾಗಿ ₹12 ಲಕ್ಷ ದಂಡ ತೆತ್ತಿದ್ದರು.

ರಾಹುಲ್ ಅಜೇಯ ಶತಕದ ನೆರವಿನಿಂದ ಲಖನೌ ತಂಡವು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 36 ರನ್ ಅಂತರದ ಅರ್ಹ ಗೆಲುವು ದಾಖಲಿಸಿತ್ತು. ಈ ಮೂಲಕ ಮುಂಬೈ ಸತತ 8ನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.