ದುಬೈ:ರಾಜಸ್ಥಾನ್ ರಾಯಲ್ಸ್ ತಂಡವು ಕ್ರಿಕೆಟಿಗರ ತರಬೇತಿಗಾಗಿ ವಿನೂತನವಾದ ಆ್ಯಪ್ ಬಿಡುಗಡೆ ಮಾಡಿದೆ.
’ದಿ ಪೆವಿಲಿಯನ್‘ ಎಂಬ ಆ್ಯಪ್ ಅನ್ನು ಬುಧವಾರ ಪರಿಚಯಿಸಿದೆ. ಇದರಲ್ಲಿ ಆಟಗಾರರು ನೇರವಾಗಿ ತಂಡದ ಕೋಚ್ ಜೊತೆಗೆ ಸಂಪರ್ಕಸಾಧಿಸಬಹುದು. ತರಬೇತಿ ಪಡೆಯಬಹುದು. ಈ ರೀತಿಯ ಆ್ಯಪ್ ಸೌಲಭ್ಯ ನೀಡುತ್ತಿರುವ ಐಪಿಎಲ್‌ನ ಮೊಟ್ಟಮೊದಲ ತಂಡವೆಂಬ ಹೆಗ್ಗಳಿಕೆಗೆ ರಾಜಸ್ಥಾನ್ ರಾಯಲ್ಸ್ ಪಾತ್ರವಾಗಿದೆ.
ಪ್ರತಿಯೊಬ್ಬ ಆಟಗಾರ ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ಈ ಆ್ಯಪ್ ತಯಾರಿಸಲಾಗಿದೆ ಎಂದು ಫ್ರ್ಯಾಂಚೈಸ್ ಮೂಲಗಳು ತಿಳಿಸಿವೆ.
ಆ್ಯಂಡ್ರಾಯ್ಡ್ ಮತ್ತು ಐಓಎಸ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ. ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಹುದು. ಇದನ್ನು ಯಾವುದೇ ದೇಶದ ಉದಯೋನ್ಮುಖ ಕ್ರಿಕೆಟಿಗರೂ ಬಳಸಬಹುದು. ಇದರಲ್ಲಿ ಎರಡೂ ಆಯಾಮಗಳ ಪರದೆ ವೀಕ್ಷಣೆಯನ್ನು ನೀಡಲಾಗಿದೆ. ಇದರಿಂದಾಗಿ ತರಬೇತಿಯ ಮತ್ತು ಮಾರ್ಗದರ್ಶನದ ವಿಡಿಯೊ ತುಣುಕುಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದು. ಇದರೊಂದಿಗೆ ಲೋಪ ತಿದ್ದಿಕೊಳ್ಳಲು ಸಹಾಯವಾಗುತ್ತದೆ. ಸ್ಪ್ಲಿಟ್ ಸ್ಕ್ರೀನ್, ಸೈಡ್ ಬೈ ಸೈಡ್ ಡಿಸ್‌ಪ್ಲೆ, ಧ್ವನಿ ಮುದ್ರಿಕೆ ಫೀಡ್‌ಬ್ಯಾಕ್ ಕೂಡ ಇದೆ.
ತಂಡದ ಕೋಚ್‌ಗಳಾದ ಅಮೋಲ್ ಮುಜುಂದಾರ್, ಸಾಯಿರಾಜ್ ಬಹುತುಳೆ, ದಿಶಾಂತ್ ಯಾಜ್ಞಿಕ್ ಮತ್ತು ಸ್ಟೀಫನ್ ಜೋನ್ಸ್ ಅವರೊಂದಿಗೆ ಆಟಗಾರರು ಸಂವಾದ ನಡೆಸಲೂ ಈ ಆ್ಯಪ್‌ನಲ್ಲಿ ಅವಕಾಶವಿದೆ.
ರಾಯಲ್ಸ್ ತಂಡವು ದುಬೈನಲ್ಲಿಆರು ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದೆ. ಬುಧವಾರದಿಂದ ಜಿಮ್‌ನಲ್ಲಿ ಅಭ್ಯಾಸ ಆರಂಭಿಸಿದೆ. ಕೆಲಕಾಲ ನೆಟ್ಸ್‌ನಲ್ಲಿಯೂ ಆಟಗಾರರು ಅಭ್ಯಾಸ ಮಾಡಿದರು. ತಂಡದಲ್ಲಿ ಕರ್ನಾಟಕದ ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ ಕೂಡ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.