ADVERTISEMENT

ಪಿಸಿಬಿ ಮುಖ್ಯಸ್ಥ ಸ್ಥಾನಕ್ಕೆ ರಮೀಜ್ ರಾಜಾ ಆಯ್ಕೆ ಸಾಧ್ಯತೆ

ಪಿಟಿಐ
Published 21 ಆಗಸ್ಟ್ 2021, 14:28 IST
Last Updated 21 ಆಗಸ್ಟ್ 2021, 14:28 IST
ಪಿಸಿಬಿ
ಪಿಸಿಬಿ   

ಕರಾಚಿ: ಟೆಸ್ಟ್ ತಂಡದ ಮಾಜಿ ನಾಯಕ ಮತ್ತು ಹೆಸರಾಂತ ವೀಕ್ಷಕ ವಿವರಣೆಕಾರ ರಮೀಜ್ ರಾಜಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗುವ ಸಾಧ್ಯತೆ ಇದೆ. ಎಹ್ಸಾನ್ ಮಣಿ ಅವರ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ಆಯ್ಕೆಗೆ ವೇದಿಕೆ ಸಜ್ಜಾಗಿದೆ.

ರಮೀಜ್ ಅವರು ಸದ್ಯ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಸಂದೇಶಗಳಿಗೆ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಆದರೆ ಕ್ರಿಕೆಟ್ ಮಂಡಳಿಯ ಮುಖ್ಯ ಪೋಷಕರೂ ಆಗಿರುವ ಪ್ರಧಾನಿ ಇಮ್ರಾನ್ ಖಾನ್ ಅವರು ಎಹ್ಸಾನ್ ಮಣಿ ಅವರ ಅವಧಿಯನ್ನು ವಿಸ್ತರಿಸಲು ಇಚ್ಛಿಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಕೆಲವೇ ದಿನಗಳಲ್ಲಿ ಪ್ರಧಾನಿಯವರು ಕ್ರಿಕೆಟ್ ಮಂಡಳಿಗೆ ಇಬ್ಬರ ಹೆಸರನ್ನು ಕಳುಹಿಸಿಕೊಡುವರು. ಈ ಪೈಕಿ ಒಬ್ಬರನ್ನು ಸದಸ್ಯರು ಆಯ್ಕೆ ಮಾಡುವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಂಬಂಧಗಳನ್ನು ಹೊಂದಿರುವ, ಶಿಕ್ಷಣ ಹೊಂದಿರುವ ಮತ್ತು ಉತ್ತಮ ವ್ಯಕ್ತಿಯಾಗಿರುವ ರಮೀಜ್ ಅವರೇ ಆಯ್ಕೆಯಾಗುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

1992ರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್ ಅವರೊಂದಿಗೆ ರಮೀಜ್ ರಾಜಾ ಆಡಿದ್ದಾರೆ. ಮಂಡಳಿಗೆ ಕ್ರಿಕೆಟ್ ಆಟಗಾರನೊಬ್ಬ ಮುಖ್ಯಸ್ಥನಾಗಬೇಕು ಎಂಬುದು ಇಮ್ರಾನ್ ಖಾನ್ ಅವರ ಆಶಯ ಕೂಡ ಆಗಿದೆ. ಇದು, ರಮೀಜ್ ಅವರ ಹಾದಿಯನ್ನು ಸುಗಮ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.