ಮುಂಬೈ: ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈನ ಯುವ ಬ್ಯಾಟರ್ ಮುಷೀರ್ ಖಾನ್ ಶತಕ ಸಿಡಿಸುವ ಮೂಲಕ ಸಚಿನ್ ತೆಂಡಲ್ಕೂರ್ ದಾಖಲೆ ಮುರಿದಿದ್ದಾರೆ.
ಭಾರತದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ವಿದರ್ಭ ಎದುರಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬಿರುಸಿನ ಶತಕ ಹೊಡೆದರು. ರಣಜಿ ಪೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ( 21 ವರ್ಷ) ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೂ 29 ವರ್ಷಗಳ ಹಿಂದಿನ ಸಚಿನ್ ದಾಖಲೆಯನ್ನು ಮುರಿದರು.
1994-95ನೇ ಸಾಲಿನ ರಣಜಿ ಪೈನಲ್ ಪಂದ್ಯದಲ್ಲಿ ಮುಂಬೈ(ಹಿಂದಿನ ಬಾಂಬೆ) ಪರವಾಗಿ ಆಡಿದ್ದ ಸಚಿನ್ ತೆಂಡೂಲ್ಕರ್ ಪಂಜಾಬ್ ವಿರುದ್ಧ 140 ರನ್ ಬಾರಿಸಿದ್ದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು. ಈ ಪಂದ್ಯದಲ್ಲಿ ಸಚಿನ್ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು. ಡ್ರಾ ಆದ ಈ ಪಂದ್ಯವನ್ನು ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮುಂಬೈ ತಂಡ ವಿಜೇತ ಎಂದು ಘೋಷಣೆ ಮಾಡಲಾಗಿತ್ತು.
ಮುಷೀರ್ ಖಾನ್ ಅಕ್ರಮಣದ ಆಟ ಬದಿಗಿಟ್ಟು ಸಹನೆಯ ಆಟವಾಡಿ 136 ರನ್ (326ಎ, 4x10) ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ಮುಂಬೈ ತಂಡ ವಿದರ್ಭಕ್ಕೆ ಸವಾಲಿನ ಗುರಿ ನೀಡಿದೆ.
ಸ್ಕೋರುಗಳು:
ಮುಂಬೈ: 224 & 418
ವಿದರ್ಭ: 105 & 10–0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.