ADVERTISEMENT

Ranji Trophy Final: ಸೌರಾಷ್ಟ್ರ ತಂಡದ ಮುಡಿಗೆ ರಣಜಿ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2023, 20:11 IST
Last Updated 19 ಫೆಬ್ರುವರಿ 2023, 20:11 IST
ರಣಜಿ ಟ್ರೋಫಿಯೊಂದಿಗೆ ಸಂಭ್ರಮಿಸಿದ ಸೌರಾಷ್ಟ್ರ ನಾಯಕ ಜೈದೇವ್ ಉನದ್ಕತ್ ಹಾಗೂ ಸಹ ಆಟಗಾರರು –ಪಿಟಿಐ ಚಿತ್ರ
ರಣಜಿ ಟ್ರೋಫಿಯೊಂದಿಗೆ ಸಂಭ್ರಮಿಸಿದ ಸೌರಾಷ್ಟ್ರ ನಾಯಕ ಜೈದೇವ್ ಉನದ್ಕತ್ ಹಾಗೂ ಸಹ ಆಟಗಾರರು –ಪಿಟಿಐ ಚಿತ್ರ   

ಕೋಲ್ಕತ್ತ : ಯಾವುದೇ ಹಂತದಲ್ಲಿಯೂ ಬಿಗಿಹಿಡಿತ ಸಡಿಲಿಸದ ಸೌರಾಷ್ಟ್ರ ತಂಡವು ರಣಜಿ ಟ್ರೋಫಿ ಗೆದ್ದುಕೊಂಡಿತು.

ಭಾನುವಾರ ಮುಗಿದ ಫೈನಲ್‌ನಲ್ಲಿ ಅರ್ಧಡಜನ್ ವಿಕೆಟ್‌ಗಳನ್ನು ಕಬಳಿಸಿದ ನಾಯಕ, ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ದಾಳಿಗೆ ಬಂಗಾಳ ತಂಡವು ತನ್ನ ತವರಿನಂಗಳದಲ್ಲಿಯೇ 9 ವಿಕೆಟ್‌ಗಳಿಂದ ಸೋತಿತು.

ಈಡನ್ ಗಾರ್ಡನ್‌ನಲ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ತಂಡವು ಎರಡನೇ ಇನಿಂಗ್ಸ್‌ನಲ್ಲಿ 70.4 ಓವರ್‌ಗಳಲ್ಲಿ 241 ರನ್‌ ಗಳಿಸಿ ಆಲೌಟ್ ಆಯಿತು. ಕೇವಲ 12 ರನ್‌ಗಳ ಗೆಲುವಿನ ಗುರಿಯನ್ನು ಸೌರಾಷ್ಟ್ರಕ್ಕೆ ಒಡ್ಡಿತು.

ADVERTISEMENT

2.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡ ಸೌರಾಷ್ಟ್ರವು 14 ರನ್ ಗಳಿಸಿ ಜಯಿಸಿತು. ಉನದ್ಕತ್ ಬಳಗವು ರಣಜಿ ಟ್ರೋಫಿ ಗೆಲುವಿನ ಸಾಧನೆ ಮಾಡುತ್ತಿರುವುದು ಇದು ಎರಡನೇ ಬಾರಿ. 2019-20ರಲ್ಲಿಯೂ ಸೌರಾಷ್ಟ್ರ ತಂಡವು ಬಂಗಾಳ ಎದುರು ಫೈನಲ್‌ನಲ್ಲಿ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಂಗಾಳ; 54.1 ಓವರ್‌ಗಳಲ್ಲಿ 174. ಸೌರಾಷ್ಟ್ರ: 110 ಓವರ್‌ಗಳಲ್ಲಿ 404. ಎರಡನೇ ಇನಿಂಗ್ಸ್: ಬಂಗಾಳ 70.4 ಓವರ್‌ಗಳಲ್ಲಿ 241 (ಅನುಸ್ಟುಪ್ ಮಜುಂದಾರ್ 61, ಮನೋಜ್ ತಿವಾರಿ 68, ಶಹಬಾಜ್ ಅಹಮದ್ 27, ಇಶಾನ್ ಪೊರೆಲ್ 22, ಜೈದೇವ್ ಉನದ್ಕತ್ 85ಕ್ಕೆ6, ಚೇತನ್ ಸಕಾರಿಯಾ 76ಕ್ಕೆ3) ಸೌರಾಷ್ಟ್ರ: 2.4 ಓವರ್‌ಗಳಲ್ಲಿ 1 ವಿಕೆಟ್‌ಗೆ 14 (ಹರ್ವಿಕ್ ದೇಸಾಯಿ ಔಟಾಗದೆ 4, ವಿಶ್ವರಾಜ್ ಜಡೇಜ ಔಟಾಗದೆ 10, ಆಕಾಶದೀಪ್ 5ಕ್ಕೆ1) ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 9 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.