ADVERTISEMENT

Ranji Trophy | ವಿದರ್ಭ ಕನಸು ಭಗ್ನ; ದಾಖಲೆಯ 42ನೇ ಬಾರಿ ಟ್ರೋಫಿ ಜಯಿಸಿದ ಮುಂಬೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2024, 8:22 IST
Last Updated 14 ಮಾರ್ಚ್ 2024, 8:22 IST
<div class="paragraphs"><p>ಮುಂಬೈ ಆಟಗಾರರ ಸಂಭ್ರಮ</p></div>

ಮುಂಬೈ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@BCCIdomestic)

ಮುಂಬೈ: ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು, ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಜಯಿಸಿದೆ.

ADVERTISEMENT

ವಿದರ್ಭ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ 169 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ದಿನದಾಟದಲ್ಲಿ 538 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿದರ್ಭ, 134.3 ಓವರ್‌ಗಳಲ್ಲಿ 368 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ವಿದರ್ಭ ಪರ ಅಮೋಘ ಶತಕ ಗಳಿಸಿದ ಅಕ್ಷಯ್ ವಾಡ್ಕರ್ (102) ಹೋರಾಟವು ವ್ಯರ್ಥವೆನಿಸಿತು. ಹರ್ಷ್ ದುಬೆ 65 ರನ್ ಗಳಿಸಿದರು. ಅವರಿಬ್ಬರು ಆರನೇ ವಿಕೆಟ್‌ಗೆ 130 ರನ್‌ಗಳ ದಿಟ್ಟ ಹೋರಾಟ ನೀಡಿದರು.

ಆದರೆ ಈ ವಿಕೆಟ್ ಪತನದೊಂದಿಗೆ ದಿಢೀರ್ ಕುಸಿತ ಕಂಡ ವಿದರ್ಭ, 14 ರನ್ ಅಂತರದಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಮುಂಬೈ ಪರ ತನುಷ್ ಕೋಟಿಯನ್ ನಾಲ್ಕು, ಮುಷೀರ್ ಖಾನ್ ಹಾಗೂ ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ:

  • ಮುಂಬೈ ಮೊದಲ ಇನಿಂಗ್ಸ್ 224ಕ್ಕೆ ಆಲೌಟ್ (ತುಷಾರ್ 75, ಯಶ್ ಠಾಕೂರ್ 54/3)

  • ವಿದರ್ಭ ಮೊದಲ ಇನಿಂಗ್ಸ್ 105ಕ್ಕೆ ಆಲೌಟ್ (ಯಷ್ ರಾಥೋಡ್ 27, ಕೋಟಿಯನ್ 7/3)

  • ಮುಂಬೈ ಎರಡನೇ ಇನಿಂಗ್ಸ್ 418ಕ್ಕೆ ಆಲೌಟ್ (ಮುಷೀರ್ ಖಾನ್ 136, ಶ್ರೇಯಸ್ 95, ರಹಾನೆ 73, ಮುಲಾನಿ 50, ಹರ್ಷ್ ದುಬೆ 144/5)

  • ವಿದರ್ಭ ಎರಡನೇ ಇನಿಂಗ್ಸ್ 368ಕ್ಕೆ ಆಲೌಟ್ (ವಾಡ್ಕರ್ 102, ಕೋಟಿಯನ್ 95/4)

  • ಪಂದ್ಯಶ್ರೇಷ್ಠ: ಮುಷೀರ್ ಖಾನ್.

  • ಸರಣಿ ಶ್ರೇಷ್ಠ: ತನುಷ್ ಕೋಟ್ಯಾನ್. 

ನಮ್ಮ ತಂಡದಲ್ಲಿ ಅತ್ಯಂತ ಕಡಿಮೆ ರನ್‌ ಗಳಿಸಿದವನು ನಾನು. ಆದರೂ ಇವತ್ತು ಭೂಮಿಯ ಮೇಲೆ ಅತಿ ಹೆಚ್ಚು ಸಂತಸದಿಂದ ಇರುವವನೂ ನಾನೇ. ತಮ್ಮ ತಂಡದ ಈ ಸಾಧನೆಯು ಅತ್ಯದ್ಭುತ.
–ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.