ADVERTISEMENT

Ranji Trophy: ಕರ್ನಾಟಕ 221ಕ್ಕೆ ಆಲೌಟ್; ಮೊದಲ ಇನಿಂಗ್ಸ್ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2024, 7:10 IST
Last Updated 8 ನವೆಂಬರ್ 2024, 7:10 IST
<div class="paragraphs"><p>ಅಭಿನವ್ ಮನೋಹರ್</p></div>

ಅಭಿನವ್ ಮನೋಹರ್

   

(ಪ್ರಜಾವಾಣಿ ಚಿತ್ರ)

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 221 ರನ್‌ಗಳಿಗೆ ಆಲೌಟ್ ಆಗಿದೆ.

ADVERTISEMENT

ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 80 ರನ್‌ಗಳ ಹಿನ್ನಡೆ ಅನುಭವಿಸಿದೆ.

ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಐದು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಮೂರನೇ ದಿನದಾಟದಲ್ಲೂ ಬಂಗಾಳದ ಬೌಲರ್‌ಗಳು ಮೇಲುಗೈ ಸಾಧಿಸಿದರು.

ದಿಟ್ಟ ಹೋರಾಟ ತೋರಿದ ಅಭಿನವ್ ಮನೋಹರ್ ಗರಿಷ್ಠ 55 ರನ್ ಗಳಿಸಿದರು. ಇನ್ನುಳಿದಂತೆ ಶ್ರೇಯಸ್ ಗೋಪಾಲ್ 28, ವಿದ್ಯಾಧರ್ ಪಾಟೀಲ್ 33 ರನ್ ಗಳಿಸಿ ಔಟ್ ಆದರು.

ಬಂಗಾಳದ ಪರ ಇಶಾನ್ ಪೊರೆಲ್ ನಾಲ್ಕು, ಸೂರಜ್ ಸಿಂಧು ಜೈಸ್ವಾಲ್ ಮೂರು ಮತ್ತು ರಿಷಭ್ ವಿವೇಕ್ ಎರಡು ವಿಕೆಟ್ ಗಳಿಸಿ ಮಿಂಚಿದರು.

ಬಂಗಾಳ ತಂಡದ ನಾಯಕ ಅನುಸ್ಟುಪ್ ಮಜುಂದಾರ್ ಶತಕದ (101) ನೆರವಿನಿಂದ ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 301 ರನ್ ಗಳಿಸಿತ್ತು. ಕರ್ನಾಟಕದ ಪರ ವಿ. ಕೌಶಿಕ್ ಐದು ವಿಕೆಟ್ ಗಳಿಸಿದರು.

ಎಲೈಟ್ 'ಸಿ' ಗುಂಪಿನಲ್ಲಿ ಕರ್ನಾಟಕ ಈವರೆಗೆ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಎರಡು ಡ್ರಾ ಫಲಿತಾಂಶದೊಂದಿಗೆ ಒಟ್ಟು ಎಂಟು ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.