ಮ್ಯಾಂಚೆಸ್ಟರ್:ಇಲ್ಲಿನಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ಕೆಲ ಹೊತ್ತು ಕಾಮೆಂಟೇಟರ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಆಗ ಕ್ರಿಕೆಟ್ ದಿಗ್ಗಜರ ಜತೆ ಕ್ಲಿಕ್ಕಿಸಿದ ಸೆಲ್ಫೀಗಳನ್ನು ಮಂಗಳವಾರ ಟ್ವೀಟ್ ಮಾಡಿದ್ದು, ಕ್ರಿಕೆಟ್ ಪ್ರಿಯರಮನಸೂರೆಗೊಂಡಿದ್ದಾರೆ.
ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಇತರ ಕ್ರಿಕೆಟ್ ದಿಗ್ಗಜರ ಜತೆ ಕಾಮೆಂಟೇಟರ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ ಅವರ ಜತೆ ಸೆಲ್ಫೀ ತೆಗೆದುಕೊಂಡಿದ್ದ ರಣವೀರ್ ನಂತರ ಫೀಲ್ಡ್‌ಗೂ ತೆರಳಿದ್ದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಟಗಾರ ಕೆ.ಎಲ್.ರಾಹುಲ್ ಜತೆಗೂ ಸೆಲ್ಫೀ ತೆಗೆದುಕೊಂಡಿದ್ದರು.
ಇದನ್ನೂ ಓದಿ:ಜಯದ ‘ಮಳೆ’ಯಲ್ಲಿ ಮಿಂದೆದ್ದ ಭಾರತ
‘ಜಗತ್ತು ಈವರೆಗೆ ಕಂಡಿರದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್!’ ಎಂದು ಸೆಹ್ವಾಗ್ ಜತೆಗಿನ ಸೆಲ್ಫೀಯನ್ನು ಟ್ವೀಟ್ ಮಾಡಿದ್ದಾರೆ.
ಸೌರವ್ ಗಂಗೂಲಿ ಅವರನ್ನು ‘ಕೋಲ್ಕತ್ತದ ರಾಜಕುಮಾರ’ ಎಂದು ಬಣ್ಣಿಸಿರುವ ರಣವೀರ್, ‘ಆಫ್ ಸೈಡ್‌ನ ದೇವರು! ಬಂಗಾಳದ ಟೈಗರ್’ ಎಂದು ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಜತೆಗಿನ ಸೆಲ್ಫೀಗಳನ್ನೂ ಪೋಸ್ಟ್ ಮಾಡಿರುವ ರಣವೀರ್, ಪ್ರತಿಯೊಬ್ಬ ಆಟಗಾರನ ಕುರಿತೂ ಒಂದೊಂದು ಆಕರ್ಷಕ ಸಂದೇಶಗಳನ್ನೂ ಪ್ರಕಟಿಸಿದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.