ಅಡಿಲೇಡ್ (ಆಸ್ಟ್ರೇಲಿಯಾ): ವೇಗದ ಬೌಲರ್ ಹ್ಯಾರಿಸ್ ರವೂಫ್ ಅವರ ಐದು ವಿಕೆಟ್ ಗೊಂಚಲು ಮತ್ತು ಸಯೀಮ್ ಅಯೂಬ್ ಅವರ ಬಿರುಸಿನ 82 ರನ್ (71 ಎಸೆತ) ನೆರವಿನಿಂದ ಪಾಕಿಸ್ತಾನ ಎರಡನೇ ಏಕದಿನ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು.
ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ಪರ್ತ್‌ನಲ್ಲಿ ನಡೆಯಲಿದೆ.
ಸ್ಕೋರುಗಳು: ಆಸ್ಟ್ರೇಲಿಯಾ: 35 ಓವರುಗಳಲ್ಲಿ 163 (ಸ್ಟೀವ್ ಸ್ಮಿತ್ 35; ಶಾಹಿನ್ ಶಾ ಅಫ್ರೀದಿ 26ಕ್ಕೆ3, ಹ್ಯಾರಿಸ್ ರವೂಫ್ 29ಕ್ಕೆ5); ಪಾಕಿಸ್ತಾನ: 26.3 ಓವರುಗಳಲ್ಲಿ 1 ವಿಕೆಟ್‌ಗೆ 169 (ಸಯೀಮ್ ಅಯೂಬ್ 82, ಅಬ್ದುಲ್ಲಾ ಶಫೀಕ್ ಔಟಾಗದೇ 64, ಬಾಬರ್ ಆಜಂ ಔಟಾಗದೇ 15). ಪಂದ್ಯದ ಆಟಗಾರ: ಹ್ಯಾರಿಸ್ ರವೂಫ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.