ADVERTISEMENT

WPL: ಆರ್‌ಸಿಬಿಗೆ ಸಾನಿಯಾ ಮೆಂಟರ್‌, ಬೆನ್‌ ಸಾಯೆರ್‌ ಮುಖ್ಯ ಕೋಚ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 11:14 IST
Last Updated 15 ಫೆಬ್ರುವರಿ 2023, 11:14 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸ್ (ಆರ್‌ಸಿಬಿ), ಮಹಿಳಾ ಪ್ರೀಮಿಯರ್ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ತನ್ನ ತಂಡಕ್ಕೆ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಮೆಂಟರ್‌ ಆಗಿ ನೇಮಿಸಿಕೊಂಡಿದೆ. ಆಸ್ಟ್ರೇಲಿಯಾದ ಬೆನ್‌ ಸಾಯೆರ್‌ ಅವರನ್ನು ಕೋಚ್‌ ಅಗಿ ನೇಮಕ ಮಾಡಿದೆ.

‘ಮೆಂಟರ್‌ ಆಗಿ ಆರ್‌ಸಿಬಿ ಮಹಿಳಾ ತಂಡವನ್ನು ಸೇರಿಕೊಳ್ಳುತ್ತಿರುವುದು ಖುಷಿಯ ವಿಚಾರ’ ಎಂದು ಆರ್‌ಸಿಬಿ ತಂಡದ ಪ್ರಕಟಣೆಯಲ್ಲಿ ಸಾನಿಯಾ ಪ್ರತಿಕ್ರಿಯಿಸಿದ್ಧಾರೆ.

‘ಮಹಿಳಾ ಪ್ರೀಮಿಯರ್‌ ಲೀಗ್‌ ಮೂಲಕ ಭಾರತದ ಮಹಿಳಾ ಕ್ರಿಕೆಟ್‌ನ ದಿಕ್ಕು ಬದಲಾಗಲಿದೆ. ಹೊಸ ಕ್ರಾಂತಿ ಉಂಟುಮಾಡಲಿರುವ ಲೀಗ್‌ನಲ್ಲಿ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇನೆ‘ ಎಂದಿದ್ದಾರೆ.

ADVERTISEMENT

ದುಬೈನಲ್ಲಿ ಮುಂದಿನ ವಾರ ನಡೆಯಲಿರುವ ದುಬೈ ಓಪನ್‌ ಟೂರ್ನಿಯ ಬಳಿಕ ನಿವೃತ್ತಿಯಾಗುವುದಾಗಿ ಸಾನಿಯಾ ಈ ಹಿಂದೆಯೇ ಪ್ರಕಟಿಸಿದ್ದಾರೆ. ಆ ಬಳಿಕ ಅವರು ಆರ್‌ಸಿಬಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಸಾಯೆರ್‌ ಮುಖ್ಯ ಕೋಚ್‌: ನ್ಯೂಜಿಲೆಂಡ್‌ ರಾಷ್ಟ್ರೀಯ ಮಹಿಳಾ ತಂಡದ ಕೋಚ್‌ ಆಗಿರುವ ಆಸ್ಟ್ರೇಲಿಯಾದ ಬೆನ್‌ ಸಾಯೆರ್‌ ಅವರು ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಸಾಯೆರ್‌ ಮುಖ್ಯ ಕೋಚ್‌:
ನ್ಯೂಜಿಲೆಂಡ್‌ ರಾಷ್ಟ್ರೀಯ ಮಹಿಳಾ ತಂಡದ ಕೋಚ್‌ ಆಗಿರುವ ಆಸ್ಟ್ರೇಲಿಯಾದ ಬೆನ್‌ ಸಾಯೆರ್‌ ಅವರು ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

45 ವರ್ಷದ ಸಾಯೆರ್‌ ಅವರು ‘ದಿ ಹಂಡ್ರಡ್ಸ್‌’ ಟಿ20 ಲೀಗ್‌ನಲ್ಲಿ ಆಡುವ ಬರ್ಮಿಂಗ್‌ಹ್ಯಾಂ ಫಿಯೊನಿಕ್ಸ್‌ ತಂಡದ ಹಾಲಿ ಕೋಚ್‌ ಆಗಿದ್ದಾರೆ. ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡುವ ಸಿಡ್ನಿ ಸಿಕ್ಸರ್ಸ್‌ ತಂಡದ ಮುಖ್ಯ ಕೋಚ್‌ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಸಹಾಯಕ ಕೋಚ್‌ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

'ಸಾಯೆರ್‌ ಅವರು ಆಸ್ಟ್ರೇಲಿಯಾ ತಂಡದ ಜತೆ ಮೂರು ವಿಶ್ವಕಪ್‌ ಟೂರ್ನಿಗಳನ್ನು ಗೆದ್ದಿದ್ದಾರೆ. ಸಿಡ್ನಿ ಸಿಕ್ಸರ್‌ ತಂಡದ ಕೋಚ್ ಆಗಿ ಬಿಗ್‌ ಬ್ಯಾಷ್‌ ಲೀಗ್‌ ಗೆಲ್ಲಿಸಿ ಕೊಟ್ಟಿದ್ದಾರೆ‘ ಎಂದು ಆರ್‌ಸಿಬಿಯ ಕ್ರಿಕೆಟ್‌ ವ್ಯವಹಾರಗಳ ನಿರ್ದೇಶಕ ಮೈಕ್‌ ಹೆಸನ್ ಹೇಳಿದ್ದಾರೆ.

ಆರ್‌ಸಿಬಿಯು ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಮಾರ್ಚ್‌ 5 ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ಕೋಚಿಂಗ್‌ ತಂಡ: ಬೆನ್‌ ಸಾಯೆರ್‌ (ಮುಖ್ಯ ಕೋಚ್‌), ಎಂ. ರಂಗರಾಜನ್‌ (ಸಹಾಯಕ ಕೋಚ್‌), ವಿ.ಆರ್‌.ವನಿತಾ (ಫೀಲ್ಡಿಂಗ್‌ ಕೋಚ್‌), ಆರ್‌.ಎಕ್ಸ್‌. ಮುರಳಿ (ಬ್ಯಾಟಿಂಗ್‌ ಕೋಚ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.