ಕಾಬೂಲ್: ಮುಂದಿನ ವಾರ ಭಾರತದ ಪ್ರವಾಸ ಕೈಗೊಳ್ಳಲಿರುವ ಅಫ್ಗಾನಿಸ್ತಾನ ತಂಡವನ್ನು ಇಬ್ರಾಹಿಂ ಝದ್ರಾನ್ ಅವರು ಮುನ್ನಡೆಸಲಿದ್ದಾರೆ. ಅನುಭವಿ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅವರು ಆರೈಕೆಯಲ್ಲಿದ್ದು ಇದೇ 11ರಿಂದ ಭಾರತದ ಎದುರು ನಡೆಯುವ ಟಿ20 ಸರಣಿಗೆ ಲಭ್ಯರಾಗುವ ಬಗ್ಗೆ ಖಚಿತವಿಲ್ಲ.
‘ಇದೇ ಮೊದಲ ಬಾರಿಗೆ ಭಾರತದಲ್ಲಿ ಮೂರು ಪಂದ್ಯಗಳ ಸರಣಿ ಆಡಲು ತೆರಳುತ್ತಿರುವುದು ಅಪಾರ ಸಂತಸ ತಂದಿದೆ. ಅಗ್ರಶ್ರೇಯಾಂಕದ ತಂಡವಾಗಿರುವ ಭಾರತದ ಎದುರು ಆಡುವುದು ಒಂದು ವಿಶಿಷ್ಟ ಅನುಭವ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮುಖ್ಯಸ್ಥ ಮೀರ್‌ವೈಸ್ ಅಶ್ರಫ್ ಹೇಳಿದ್ದಾರೆ.
ಭಾರತದ ಎದುರಿನ ಸರಣಿಯಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿವೆ. 11ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ. 14ರಂದು ಇಂದೋರ್ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.
ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಕ್ರಂ ಅಲಿಖಿಲ್ (ವಿಕೆಟ್ ಕೀಪರ್), ಹಜರತ್‌ವುಲ್ಲಾ ಝಝೈ, ರೆಹಮತ್ ಶಾ, ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜಮುಲ್ಲಾ ಒಮರ್‌ಝೈ, ಶರಾಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಖಿ, ಫರೀದ್ ಅಹಮದ್, ನವೀನ್ ಉಲ್ ಹಕ್, ನೂರ್ ಅಹಮದ್, ಮೊಹಮ್ಮದ್ ಸಲೀಂ, ಖೈಸ್ ಅಹಮದ್, ಗುಲ್ಬದೀನ್ ನೈಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.