ಸೌತಾಂಪ್ಟನ್:ಭಾರತದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿಅವರು ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ.
ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಧೋನಿ ಅವರು ಸೇನೆಯ ‘ಕಠಾರಿ ಮುದ್ರೆ’ಯನ್ನು ಹಾಕಿಸಿಕೊಂಡುಗಮನ ಸೆಳೆದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆಯು ಕ್ಯಾಮೆರಾ ಕಣ್ಣಿಗೆ ಬಿದ್ದಿತು. ಟಿವಿ ವಾಹಿನಿಗಳಲ್ಲಿ ಆ ದೃಶ್ಯ ಪ್ರಸಾರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯಿತು.
ಇದನ್ನೂ ಓದಿರಿ: ಧೋನಿ ಗ್ಲೌಸ್ನಲ್ಲಿ ಸೇನೆಗೆ ಗೌರವ
ಈ ಕುರಿತು ಮಾತನಾಡಿರುವ ಐಸಿಸಿಯ ಪ್ರಧಾನ ವ್ಯವಸ್ಥಾಪ ಕ್ಲೈರ್ ಫರ್ಲಾಂಗ್, ‘ಧೋನಿ ಅವರು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ಗಳಮೇಲೆ ಹಾಕಿಕೊಂಡಿರುವ ಮುದ್ರೆಯನ್ನು ತೆಗೆಯಲು ಸೂಚಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇವೆ,’ ಎಂದು ಹೇಳಿದ್ದಾರೆ.
ಧೋನಿಯವರು ಭಾರತೀಯ ಸೇನೆಯ ಪ್ಯಾರಾಶೂಟ್ ರೆಜಿಮೆಂಟ್‌ನ ಗೌರವ ಕರ್ನಲ್ ಕೂಡ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.