ADVERTISEMENT

ಇಂಡಿಯನ್ ಪ್ರೀಮಿಯರ್ ಲೀಗ್ | ಪಂಜಾಬ್ ಕಿಂಗ್ಸ್‌ಗೆ ರಿಕಿ ಪಾಂಟಿಂಗ್ ಮುಖ್ಯ ಕೋಚ್

ಪಿಟಿಐ
Published 18 ಸೆಪ್ಟೆಂಬರ್ 2024, 13:08 IST
Last Updated 18 ಸೆಪ್ಟೆಂಬರ್ 2024, 13:08 IST
ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್   

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಈ ಹಿಂದೆ ಪಂಜಾಬ್ ತಂಡಕ್ಕೆ ಟ್ರೆವರ್ ಬೇಲಿಸ್ ಅವರು ಕೋಚ್ ಆಗಿದ್ದರು. ತಂಡವು ನಿರೀಕ್ಷಿತ ಫಲಿತಾಂಶ ನೀಡದ ಕಾರಣ ಅವರನ್ನು ಕೈಬಿಡಲಾಗಿತ್ತು. ಇದೀಗ ಆ ಸ್ಥಾನಕ್ಕೆ ರಿಕಿ ನೇಮಕವಾಗಿದ್ದಾರೆ. 

ರಿಕಿ ಅವರು ಕಳೆದ ಏಳು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು. 

ADVERTISEMENT

‘ನಿನ್ನೆ (ಮಂಳವಾರ) ಪಾಂಟಿಂಗ್ ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷ ಅವರು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉತ್ತಮ ತಂಡವನ್ನು ಕಟ್ಟಿ ಬೆಳೆಸಲು ಅವರಿಗೆ ಅಷ್ಟು ಸಮಯ ಬೇಕಿದೆ. ನೆರವು ಸಿಬ್ಬಂದಿ ನೇಮಕ ಕುರಿತು ರಿಕಿ ಕಾರ್ಯಯೋಜನೆ ರೂಪಿಸುವರು’ ಎಂದು ಐಪಿಎಲ್ ಮೂಲಗಳು ತಿಳಿಸಿವೆ. 

ರಿಕಿ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡವು 2020ರ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ಡೆಲ್ಲಿಗೂ ಮುನ್ನ ಅವರು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದರು. 

2008ರಿಂದ ಪಂಜಾಬ್ ತಂಡವು ಐಪಿಎಲ್‌ನಲ್ಲಿ ಆಡುತ್ತಿದೆ. ಆದರೆ ಇದುವರೆಗೆ ಪ್ರಶಸ್ತಿ ಜಯಿಸಿಲ್ಲ. ನಾಲ್ವರು ಸಹ ಮಾಲೀಕರು ಇರುವ ಪಂಜಾಬ್ ತಂಡದ ಫ್ರ್ಯಾಂಚೈಸಿಯು ವಿಶ್ವಕಪ್ ವಿಜೇತ ನಾಯಕನೆಂದೇ ಖ್ಯಾತವಾಗಿರುವ ಪಾಂಟಿಂಗ್  ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.