ADVERTISEMENT

ಟಿ20 ವಿಶ್ವಕಪ್‌ ಸ್ಥಾನಕ್ಕೆ ರಿಂಕು ಪ್ರಮುಖ ಸ್ಪರ್ಧಿ: ಅಶೀಶ್ ನೆಹ್ರಾ

ಪಿಟಿಐ
Published 3 ಡಿಸೆಂಬರ್ 2023, 14:51 IST
Last Updated 3 ಡಿಸೆಂಬರ್ 2023, 14:51 IST
<div class="paragraphs"><p>ರಿಂಕು ಸಿಂಗ್&nbsp; –ಪಿಟಿಐ ಚಿತ್ರ</p></div>

ರಿಂಕು ಸಿಂಗ್  –ಪಿಟಿಐ ಚಿತ್ರ

   

ನವದೆಹಲಿ: ಸ್ಫೋಟಕ ಶೈಲಿಯ ಎಡಗೈ ಬ್ಯಾಟರ್‌ ರಿಂಕು ಸಿಂಗ್ ಅವರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಮುಖ ಸ್ಪರ್ಧಿಯಾಗಿದ್ದಾರೆ.  ತಂಡದಲ್ಲಿ ಫಿನಿಶರ್ ಸ್ಥಾನಕ್ಕೆ ಅವರು ಪೈಪೋಟಿ ನಡೆಸಿದ್ದಾರೆ. ಉಳಿದ ಆಟಗಾರರ ಸ್ಪರ್ಧೆಯನ್ನು ಅವರು ಮೀರಿ ನಿಲ್ಲಬೇಕಿದೆ  ಎಂದು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಹೇಳಿದ್ದಾರೆ.

ಮುಂದಿನ ವರ್ಷ ಅಮೆರಿಕ, ವೆಸ್ಟ್‌ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ  ಐದು ಪಂದ್ಯಗಳ ಟಿ20 ಸರಣಿಯಲ್ಲಿ ರಿಂಕು ಉತ್ತಮವಾಗಿ ಆಡಿದ್ದರು.  ಶುಕ್ರವಾರ ರಾಯಪುದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 29 ಎಸೆತಗಳಲ್ಲಿ 46 ರನ್‌ ಗಳಿಸಿದ್ದರು. 

ತಿರುವನಂತಪುರಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಅವರು  ಒಂಬತ್ತು ಎಸೆತಗಳಲ್ಲಿ ಔಟಾಗದೆ 31 ರನ್‌ ಗಳಿಸಿದ್ದರು.  

‘ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ ಬಹಳಷ್ಟು ಸಮಯವಿದೆ.  ವಿಶ್ವಕಪ್‌ಗಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಆಗಬಹುದು. ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್–ಬ್ಯಾಟರ್) ಮತ್ತು ತಿಲಕ್ ವರ್ಮಾ ಅವರು ಇದ್ದಾರೆ. ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಅವರು ಆಡುವ ಸ್ಥಾನಗಳ ಬಗ್ಗೆಯೂ ಚರ್ಚಿಸಬೇಕು’ ಎಂದು ನೆಹ್ರಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.