ನವದೆಹಲಿ: ಯುವ ಆಟಗಾರ ರಿಷಭ್ ಪಂತ್ ಅವರು ಮಹೇಂದ್ರಸಿಂಗ್ ಧೋನಿಯವರಂತೆ ಆಗುವ ಪ್ರಯತ್ನ ಮಾಡಬಾರದು. ತಮ್ಮದೇ ಆದ ಶೈಲಿಯಲ್ಲಿ ಆಡಿ ಬೆಳೆಯಬೇಕು ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಹೇಳಿದ್ದಾರೆ.
ಬುಧವಾರ ನಡೆದ ತಂಡದ ಆಯ್ಕೆ ಸಭೆಯ ನಂತರ ಮಾತನಾಡಿದ ಅವರು, ‘ಈ ಕುರಿತು ಸುನಿಲ್ ಗಾವಸ್ಕರ್ ಮತ್ತು ರೋಹಿತ್ ಶರ್ಮಾ ಹೇಳಿರುವ ಮಾತುಗಳಿಗೆ ನನ್ನ ಸಹಮತವಿದೆ. ರಿಷಭ್‌ಗೆ ತಮ್ಮದೇ ಆದ ಪ್ರತಿಭೆ ಇದೆ. ಒಂದೆರಡು ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಗಳಿಸಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಅದರಿಂದ ಅವರು ಉತ್ತಮವಾಗಿ ಆಡುವತ್ತ ಚಿತ್ತ ಹರಿಸಬೇಕು’ ಎಂದು ಹೇಳಿದರು.
‘ಇನ್ನೊಬ್ಬರನ್ನು ಅನುಕರಿಸಲು ಮತ್ತು ಅವರ ಸಾಧನೆಯ ಮಟ್ಟಕ್ಕೆ ತಲುಪಲು ಪ್ರಯತ್ನಿಸುವುದರಿಂದ ಒತ್ತಡ ಹೆಚ್ಚುತ್ತದೆ. ಆಗ ಸಾಮರ್ಥ್ಯ ಸಾಬೀತು ಮಾಡಲು ಕಷ್ಟವಾಗುತ್ತದೆ. ರಿಷಭ್ ತಮ್ಮ ಶೈಲಿಯ ಆಟವನ್ನು ರೂಢಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.