ADVERTISEMENT

ಪಂತ್ ಸೆಂಚುರಿ ಪಂಚ್; ಆಕಾಶಕ್ಕೆ ಚಿಮ್ಮಿದ ಬ್ಯಾಟ್, ಬೌಂಡರಿ ಗೆರೆ ದಾಟಿದ ಚೆಂಡು!

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:55 IST
Last Updated 14 ಜನವರಿ 2022, 7:55 IST
ರಿಷಭ್ ಪಂತ್‌ ಬ್ಯಾಟಿಂಗ್ ವೈಖರಿ –ಟ್ವಿಟರ್ ಚಿತ್ರ
ರಿಷಭ್ ಪಂತ್‌ ಬ್ಯಾಟಿಂಗ್ ವೈಖರಿ –ಟ್ವಿಟರ್ ಚಿತ್ರ   

ಕೇಪ್‌ಟೌನ್: ಟೀಮ್‌ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ ಅಮೋಘ ಶತಕದ ಮೂಲಕ ಗಮನ ಸೆಳೆದಿದ್ದಾರೆ.

13 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭಿಕ ಆಘಾತ ಎದುರಿಸಿತು. ಕೆ.ಎಲ್‌.ರಾಹುಲ್‌ 10, ಮಯಂಕ್ ಅಗರ್‌ವಾಲ್‌ 07, ಚೇತೇಶ್ವರ್ ಪೂಜಾರ 09, ಅಂಜಿಕ್ಯ ರಹಾನೆ 01 ರನ್‌ ಗಳಿಸಿ ಬೇಗ ಔಟಾದರು. ಬಳಿಕ ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ (29) ಹಾಗೂ ರಿಷಭ್ ಪಂತ್ (100) ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.

ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರು ಉತ್ತಮ ತಂತ್ರ ಮತ್ತು ತಾಳ್ಮೆಯನ್ನು ತೋರಿದ ಪಂತ್‌, ಆರು ಬೌಂಡರಿ, ನಾಲ್ಕು ಸಿಕ್ಸರ್‌ ಸಿಡಿಸಿ ಮಿಂಚಿದರು.

ADVERTISEMENT

ವೇಗಿ ಡ್ವಾನೆ ಒಲಿವಿಯರ್ ಎಸೆದ 9 ನೇ ಓವರ್‌ಗಳಲ್ಲಿ ಬೌಂಡರಿ ಬಾರಿಸಲು ಪಂತ್ ಮುಂದಾದರು. ಒಂದು ಕಡೆ ಚೆಂಡು ಬೌಂಡರಿ ಗೆರೆ ದಾಟಿತ್ತು. ಮತ್ತೊಂದೆಡೆ ಪಂತ್‌ ಕೈಯಲ್ಲಿದ್ದ ಬ್ಯಾಟ್‌ ಗಾಳಿಯಲ್ಲಿ ತೇಲಿ ಹೋಗಿತ್ತು. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 67.3 ಓವರ್‌ಗಳಲ್ಲಿ 198 ರನ್ ಗಳಿಸಿ ಆಲೌಟ್‌ ಆಯಿತ್ತು. ಪಂತ್ ಸಾಹಸದಿಂದಾಗಿ ಆತಿಥೇಯರಿಗೆ 212 ರನ್‌ಗಳ ಗುರಿ ನೀಡಲು ಸಾಧ್ಯವಾಯಿತು. ಆದರೆ, ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಮುಕ್ತಾಯಕ್ಕೆ 29.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 101 ರನ್ ಗಳಿಸಿತು.

ಕೀಗನ್ ಪೀಟರ್ಸನ್ ಔಟಾಗದೆ 48 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಕೀಗನ್ ಮತ್ತು ಡೀನ ಎಲ್ಗರ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು. ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಎಲ್ಗರ್ ಔಟಾಗುವುದರೊಂದಿಗೆ ದಿನದಾಟ ಮತ್ತು ಜೊತೆಯಾಟಕ್ಕೆ ತೆರೆಬಿತ್ತು. ಇನಿಂಗ್ಸ್‌ನ ಎಂಟನೆ ಓವರ್‌ನಲ್ಲಿಯೇ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಏಡನ್ ಮರ್ಕರಂ ಔಟಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.