ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕೊಡಗಿನ ಕುವರ ರಾಬಿನ್ ಉತ್ತಪ್ಪ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
2007ರಲ್ಲಿ ಟಿ–20 ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿದ್ದ 36 ವರ್ಷದ ಉತ್ತಪ್ಪ 2015ರಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದರು.
ಟ್ವಿಟರ್‌ನಲ್ಲಿ ಉತ್ತಪ್ಪ ನಿವೃತ್ತಿ ಘೋಷಣೆಯ ಪೋಸ್ಟ್ ಮಾಡಿದ್ದಾರೆ.
‘ನನ್ನ ದೇಶ ಭಾರತ ಮತ್ತು ನನ್ನ ರಾಜ್ಯ ಭಾರತವನ್ನು ಪ್ರತಿನಿಧಿಸಿದ್ದು, ಅತ್ಯಂತ ಗೌರವದ ಸಂಗತಿಯಾಗಿದೆ. ಎಲ್ಲ ಒಳ್ಳೆಯ ಸಂಗತಿಗಳು ಒಂದು ದಿನ ಅಂತ್ಯವಾಗಲೇಬೇಕು. ಅತ್ಯಂತ ಕೃತಜ್ಞತೆಯಿಂದ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
‘ವೃತ್ತಿಪರ ಕ್ರಿಕೆಟ್‌ನಲ್ಲಿ 20 ವರ್ಷ ಆಡಿದೆ. ನನ್ನ ತವರು ರಾಜ್ಯ ಕರ್ನಾಟಕ ಹಾಗೂ ದೇಶವನ್ನು ಪ್ರತಿನಿಧಿಸಿದ್ದು ನನಗೆ ಸಂದ ದೊಡ್ಡ ಗೌರವ. ಇದೊಂದು ಸುಂದರವಾದ ಪ್ರಯಾಣವಾಗಿದೆ. ಇದರಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ. ಆದೆಲ್ಲವನ್ನೂ ಮೀರಿ ಈ ವೃತ್ತಿಜೀವನದ ಅವಧಿಯನ್ನು ಮನಪೂರ್ವಕವಾಗಿ ಆಸ್ವಾದಿಸಿದ್ದೇನೆ. ಗೌರವ ಗಳಿಸಿದ್ದೇನೆ. ಈ ಎಲ್ಲ ಅನುಭವಗಳೂ ನನ್ನನ್ನು ಉತ್ತಮ ಮಾನವನನ್ನಾಗಿ ರೂಪಿಸಿವೆ’ ಎಂದು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.