ಚೆನ್ನೈ: 2021ರ ಐಪಿಎಲ್ ಹರಾಜು ಆರಂಭಕ್ಕೂ ಮುನ್ನವೇ ಒಪ್ಪಂದ ಕುದುರಿದ್ದರಿಂದ ಕನ್ನಡಿಗ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದರು. ಕಳೆದ ಐಪಿಎಲ್ ಸರಣಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಉತ್ತಪ್ಪ, 12 ಪಂದ್ಯಗಳಲ್ಲಿ 196 ರನ್ ಕಲೆ ಹಾಕಿದ್ದರು.
ಭಾನುವಾರ ಸಿಎಸ್‌ಕೆ ಟ್ವಿಟ್ಟರ್ ಪೇಜಲ್ಲಿವಿಡಿಯೊಂದನ್ನು ಪೋಸ್ಟ್ ಮಾಡಿರುವ ರಾಬಿನ್ ಉತ್ತಪ್ಪ, ಸಿಎಸ್‌ಕೆ ತಂಡಕ್ಕೆ ಆಯ್ಕೆಯಾಗಿದ್ದು, ಬಹು ದಿನಗಳ ಆಸೆ ಈಡೇರಿದಂತೆ ಎಂದಿದ್ದು, ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಅವರ ಜೊತೆ ಸರಣಿ ಗೆಲ್ಲಬೇಕು ಎಂದುಕೊಂಡಿದ್ದೆ ಎಂದು ತಮಿಳು ಮತ್ತು ಇಂಗ್ಲೀಷ್‌ನಲ್ಲಿ ಹೇಳಿಕೊಂಡಿದ್ದಾರೆ.
"ಸಿಎಸ್‌ಕೆ ತಂಡ ಸೇರಿದ್ದರಿಂದ ಕೊಂಚ ನನ್ನ ಆಸೆ ಈಡೇರಿದೆ. ಧೋನಿ ಜೊತೆ ಆಡಿ 12-13 ವರ್ಷಗಳಾಗಿವೆ. ಅವರು ನಿವೃತ್ತಿಯಾಗುವ ಮೊದಲು ಅವರೊಂದಿಗೆ ಟೂರ್ನಮೆಂಟ್ ಆಡಿ, ಗೆಲ್ಲಲು ನಾನು ಬಯಸಿದ್ದೆ" ಎಂದು ಉತ್ತಪ್ಪ ವಿಡಿಯೊದಲ್ಲಿ ಹೇಳಿದ್ದಾರೆ.
2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಟಿ 20 ಸರಣಿಯಲ್ಲಿ ಉತ್ತಪ್ಪ ಉತ್ತಮ ಪ್ರದರ್ಶನ ನೀಡಿದ್ದರು.
ಇದುವರೆಗೆ ಐಪಿಎಲ್‌ನಲ್ಲಿ ಅವರು 24 ಅರ್ಧಶತಕಗಳ ಜೊತೆ ಸುಮಾರು 130 ರ ಸ್ಟ್ರೈಕ್ ರೇಟ್‌ನಲ್ಲಿ 4607 ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.