ADVERTISEMENT

ಎರಡನೇ ಮಗುವಿಗೆ ತಂದೆಯಾದ ರೋಹಿತ್; ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ

ಪಿಟಿಐ
Published 16 ನವೆಂಬರ್ 2024, 9:44 IST
Last Updated 16 ನವೆಂಬರ್ 2024, 9:44 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಮುಂಬೈ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ರೋಹಿತ್ ಅವರ ಪತ್ನಿ ರಿತಿಕಾ ಶುಕ್ರವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ADVERTISEMENT

ಇದರೊಂದಿಗೆ ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಪರ್ತ್ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ವೈಯಕ್ತಿಕ ಕಾರಣದಿಂದಾಗಿ ರೋಹಿತ್ ಪರ್ತ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರಲಿಲ್ಲ.

ರೋಹಿತ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವರೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಕಳಪೆ ಲಯದಲ್ಲಿರುವ ರೋಹಿತ್‌‌‌ಗೆ ಪೂರ್ವ ಸಿದ್ಧತೆಯ ಕೊರತೆಯು ಕಾಡುವ ಭೀತಿಯಿದೆ.

ಒಂದು ವೇಳೆ ರೋಹಿತ್ ಅಲಭ್ಯರಾದರೆ ತಂಡವನ್ನು ಜಸ್‌ಪ್ರೀತ್ ಬೂಮ್ರಾ ಮುನ್ನಡೆಸಲಿದ್ದಾರೆ. ಹಾಗೆಯೇ ಓಪನರ್ ಸ್ಥಾನಕ್ಕೆ ಕೆ.ಎಲ್. ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ಹೆಸರು ಪರಿಗಣನೆಯಲ್ಲಿದೆ.

2015ರಲ್ಲಿ ರೋಹಿತ್ ಮತ್ತು ರಿತಿಕಾ ಮದುವೆಯಾಗಿದ್ದರು. 2018ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು.

ಐದು ಪಂದ್ಯಗಳ ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:

ನ.22ರಿಂದ ನ.26: ಮೊದಲ ಟೆಸ್ಟ್, ಪರ್ತ್

ಡಿ.6ರಿಂದ ಡಿ.10: ಎರಡನೇ ಟೆಸ್ಟ್, ಅಡಿಲೇಡ್

ಡಿ.14ರಿಂದ ಡಿ.18: ಮೂರನೇ ಟೆಸ್ಟ್, ಬ್ರಿಸ್ಬೇನ್

ಡಿ.26ರಿಂದ ಡಿ.30: ನಾಲ್ಕನೇ ಟೆಸ್ಟ್, ಮೆಲ್ಬರ್ನ್

ಜ.3ರಿಂದ ಜ.7: ಐದನೇ ಟೆಸ್ಟ್, ಸಿಡ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.