ADVERTISEMENT

ಸ್ಟಾರ್ ಸ್ಪೋರ್ಟ್ಸ್ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2024, 12:56 IST
Last Updated 19 ಮೇ 2024, 12:56 IST
   

ಮುಂಬೈ: ಗೌಪತ್ಯೆ ನಿಯಾಮವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಮಾಜಿ ನಾಯಕ ರೋಹಿತ್ ಶರ್ಮಾ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

‘ಮನವಿ ಮಾಡಿದ ಮೇಲೆಯೂ ತಂಡದ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ವೈಯಕ್ತಿಕ ಸಂಭಾಷೆಗಳ ಆಡಿಯೊ ಮತ್ತು ವಿಡಿಯೊ ತುಣುಕನ್ನು ಹಂಚಿಕೊಳ್ಳುವುದನ್ನು ಸ್ಟಾರ್ ಸ್ಟೋರ್ಟ್‌ ಮುಂದುವರೆಸಿದೆ’ ಎಂದು ಆರೋಪಿಸಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಅಸಮಾಧಾನ ಹೊರಹಾಕಿರುವ ರೋಹಿತ್, ‘ಕ್ರಿಕೆಟಿಗರ ಬದುಕು ಎಷ್ಟು ದುಸ್ತರವಾಗಿದೆ ಎಂದರೆ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಖಾಸಗಿಯಾಗಿ ನಡೆಸುವ ಪ್ರತಿಯೊಂದು ಸಂಭಾಷಣೆಗಳು, ನಮ್ಮ ಪ್ರತಿ ಹೆಜ್ಜೆಗಳನ್ನು ಕ್ಯಾಮೆರಾಗಳು ರೆಕಾರ್ಡ್‌ ಮಾಡಿ ಪ್ರಸಾರ ಮಾಡುತ್ತಿವೆ’ ಎಂದಿದ್ದಾರೆ.

ADVERTISEMENT

‘ನನ್ನ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕೇಳಿಕೊಂಡರೂ ಅದು ಪ್ರಸಾರ ಮಾಡಿತ್ತು. ಇದು ಗೌಪತ್ಯೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗಳಿಗಾಗಿಯೊ, ವೀಕ್ಷಣೆ ಹೆಚ್ಚುಸುವುದಕ್ಕಾಗಿಯೋ ಮಾಡುವ ಈ ಕೆಲಸ ಮುಂದೆ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.