ನ್ಯೂಯಾರ್ಕ್: ಅಮೆರಿಕದಲ್ಲಿ ನಡೆಯುತ್ತಿರುವ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಭಾರತ ತಂಡ ಶುಭಾರಂಭ ಮಾಡಿದೆ. ಆದರೆ, ನಾಯಕ ರೋಹಿತ್ ಶರ್ಮಾ ತೋಳಿನ ಗಾಯಕ್ಕೆ ಒಳಗಾಗಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿದೆ.
ಜೂನ್ 9ರಂದು ಪಾಕಿಸ್ತಾನ ವಿರುದ್ಧದ ಪಂದ್ಯವಿದ್ದು, ಈ ನಡುವೆ ರೋಹಿತ್ ಗಾಯಗೊಂಡಿರುವುದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಪಂದ್ಯದಲ್ಲಿ 37 ಎಸೆತಗಳಲ್ಲಿ 57 ರನ್ ಸಿಡಿಸಿದ ರೋಹಿತ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೇಗಿ ಜೋಶ್ ಲಿಟ್ಟಲ್ ಎಸೆದ ಚೆಂಡನ್ನು ಹೊಡೆಯುವ ಯತ್ನದಲ್ಲಿ ರೋಹಿತ್ ವಿಫಲರಾದರು. ಆ ಚೆಂಡು ರೋಹಿತ್ ಅವರ ಬಲತೋಳಿನ ಎಡಬದಿಗೆ ಬಡಿದು ಗಾಯವಾಗಿದೆ. ಈ ಸಂದರ್ಭ ತೀವ್ರ ನೋವಾಗುತ್ತಿರುವುದನ್ನು ರೋಹಿತ್ ವ್ಯಕ್ತಪಡಿಸಿದರು.
ಹೆಚ್ಚು ಬೌನ್ಸ್ ಮತ್ತು ವೇಗವಾಗಿ ಚೆಂಡು ಪುಟಿದೇಳುತ್ತಿದ್ದು, 16 ಓವರ್‌ಗಳಲ್ಲಿ 99 ರನ್‌ಗಳಿಗೆ ಐರ್ಲೆಂಡ್ ಅನ್ನು ಕಟ್ಟಿಹಾಕುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು.
ಆರ್ಶದೀಪ್ (2/35), ಹಾರ್ದಿಕ್ ಪಾಂಡ್ಯ (3/27), ಮೊಹಮ್ಮದ್ ಸಿರಾಜ್ (1/13) ಮತ್ತು ಜಸ್‌ಪ್ರೀತ್ ಬೂಮ್ರಾ (2/6) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.