ADVERTISEMENT

ಜೇಸನ್‌ ರಾಯ್ ಶತಕ

ಇಂಗ್ಲೆಂಡ್‌ಗೆ ನಾಲ್ಕನೇ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 17:11 IST
Last Updated 22 ಜೂನ್ 2018, 17:11 IST
ಶತಕ ಗಳಿಸಿದ ನಂತರ ಇಂಗ್ಲೆಂಡ್‌ ಆಟಗಾರ ಜೇಸನ್‌ ರಾಯ್‌ ಸಂಭ್ರಮಿಸಿದರು.
ಶತಕ ಗಳಿಸಿದ ನಂತರ ಇಂಗ್ಲೆಂಡ್‌ ಆಟಗಾರ ಜೇಸನ್‌ ರಾಯ್‌ ಸಂಭ್ರಮಿಸಿದರು.   

ಲಂಡನ್‌: ಆರಂಭಿಕ ಆಟಗಾರ ಜೇಸನ್‌ ರಾಯ್‌ (101; 83ಎ, 12ಬೌಂ, 2ಸಿ) ಅವರ ಶತಕದ ಬಲದಿಂದ ಇಂಗ್ಲೆಂಡ್‌ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 4-0ರ ಮುನ್ನಡೆ ಗಳಿಸಿದೆ.

ಚೆಸ್ಟರ್‌ ಲೆ ಸ್ಟ್ರೀಟ್‌ನ ರಿವರ್‌ಸೈಡ್‌ ಅಂಗಳದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 310ರನ್‌ ಕಲೆಹಾಕಿತು. ಸವಾಲಿನ ಗುರಿಯನ್ನು ಇಂಗ್ಲೆಂಡ್‌ ತಂಡ 44.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಜೇಸನ್‌ ರಾಯ್‌ ಮತ್ತು ಜಾನಿ ಬೇಸ್ಟೊ (79; 66ಎ, 10ಬೌಂ) ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ 174ರನ್‌ ದಾಖಲಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 310 (ಆ್ಯರನ್‌ ಫಿಂಚ್‌ 100, ಟ್ರಾವಿಸ್‌ ಹೆಡ್‌ 63, ಶಾನ್‌ ಮಾರ್ಷ್‌ 101, ಆ್ಯಷ್ಟನ್‌ ಅಗರ್‌ 19; ಮಾರ್ಕ್‌ ವುಡ್‌ 49ಕ್ಕೆ2, ಡೇವಿಡ್‌ ವಿಲ್ಲಿ 43ಕ್ಕೆ4, ಆದಿಲ್‌ ರಶೀದ್‌ 73ಕ್ಕೆ2).

ಇಂಗ್ಲೆಂಡ್‌:44.4 ಓವರ್‌ಗಳಲ್ಲಿ 4 ವಿಕೆಟ್‌ಗೆ 314 (ಜೇಸನ್‌ ರಾಯ್‌ 101, ಜಾನಿ ಬೇಸ್ಟೊ 79, ಅಲೆಕ್ಸ್‌ ಹೇಲ್ಸ್‌ ಔಟಾಗದೆ 34, ಜೋ ರೂಟ್‌ 27, ಏಯೊನ್‌ ಮಾರ್ಗನ್‌ 15, ಜೊಸ್‌ ಬಟ್ಲರ್‌ ಔಟಾಗದೆ 54; ಬಿಲ್ಲಿ ಸ್ಟಾನ್‌ಲೇಕ್ 54ಕ್ಕೆ1, ನೇಥನ್‌ ಲಿಯೊನ್‌ 38ಕ್ಕೆ1, ಆ್ಯಷ್ಟನ್‌ ಅಗರ್ 48ಕ್ಕೆ2).

ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 6 ವಿಕೆಟ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 4–0ರ ಮುನ್ನಡೆ.

ಪಂದ್ಯ ಶ್ರೇಷ್ಠ: ಜೇಸನ್‌ ರಾಯ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.