ADVERTISEMENT

ಫಕ್ರ್ ಜಮಾನ್ ದಾರಿ ತಪ್ಪಿಸಿದರೇ ಡಿ ಕಾಕ್: ನಿಯಮ ಏನು ಹೇಳುತ್ತದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2021, 14:01 IST
Last Updated 5 ಏಪ್ರಿಲ್ 2021, 14:01 IST
ಫಕ್ರ್ ಜಮಾನ್ ವಿವಾದಾತ್ಮಕ ರನೌಟ್
ಫಕ್ರ್ ಜಮಾನ್ ವಿವಾದಾತ್ಮಕ ರನೌಟ್   

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ತಪ್ಪಾದ ಸನ್ನೆಯ ಮೂಲಕ 'ಮೋಸ' ಮಾಡಿದ ಕಾರಣ ದ್ವಿಶತಕದ ಅಂಚಿನಲ್ಲಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಕ್ರ್ ಜಮಾನ್ ರನೌಟ್ ಆಗಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ನಿಯಮಗಳ ಕುರಿತು ಸ್ಪಷ್ಟನೆಯನ್ನು ನೀಡಿದೆ.

ನಿಮಯಗಳನ್ನು ಮುಂದಿಟ್ಟಿರುವ ಎಂಸಿಸಿ, 'ಆಟಗಾರರಿಂದ ಮೋಸಗೊಳಿಸುವ ಪ್ರಯತ್ನ ನಡೆದಿದೆಯೇ ಎಂಬುದನ್ನು ನಿರ್ಣಯಿಸುವ ಹಕ್ಕು ಅಂಪೈರ್‌ದ್ದಾಗಿದೆ' ಎಂದು ಹೇಳಿದೆ.

'41.5.1 ನಿಯಮ ಪ್ರಕಾರ ಬ್ಯಾಟ್ಸ್‌ಮನ್ (ಸ್ಟ್ರೈಕರ್) ಚೆಂಡನ್ನು ಎದುರಿಸಿದ ಬಳಿಕ ಯಾವುದೇ ಫೀಲ್ಡರ್, ಅನುಚಿತ ಪದ ಪ್ರಯೋಗ, ದಿಕ್ಕು ತಪ್ಪಿಸುವ ಅಥವಾ ಉದ್ದೇಶಪೂರ್ವಕವಾಗಿ ಅಡ್ಡಿಗೊಳಿಸುವ ಮೂಲಕ ಬ್ಯಾಟ್ಸ್‌ಮನ್‌ಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುವುದು ಅನುಚಿತ' ಎಂದು ಹೇಳಿದೆ.

'ಕಾನೂನು ಸ್ಪಷ್ಟವಾಗಿದೆ, ಬ್ಯಾಟ್ಸ್‌ಮನ್ ದಿಕ್ಕುತಪ್ಪುವ ಬದಲು ಆತನನ್ನು ಗಮನ ಬೇರೆಡೆ ತಿರುಗಿಸಿ ದಿಕ್ಕುತಪ್ಪುವಂತೆ ಮಾಡಲಾಗಿದೆ. ಆಟಗಾರರಿಂದ ಮೋಸಗೊಳಿಸುವ ಪ್ರಯತ್ನ ನಡೆದಿದೆಯೇ ಎಂಬುದನ್ನು ನಿರ್ಣಯಿಸುವುದು ಅಂಪೈರ್‌ಗೆ ಬಿಟ್ಟ ವಿಷಯ. ಅದು ಸಾಬೀತಾದ್ದಲ್ಲಿ ಐದು ಪೆನಾಲ್ಟಿ ರನ್‌ಗಳ ದಂಡ ಹೇರಲಾಗುತ್ತದೆ. ಅಲ್ಲದೆ ಬ್ಯಾಟ್ಸ್‌ಮನ್ ಮುಂದಿನ ಚೆಂಡು ಎದುರಿಸುತ್ತಾರೆ' ಎಂದಿದೆ.

ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 17 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ದಕ್ಷಿಣ ಆಫ್ರಿಕಾ ಒಡ್ಡಿದ 342 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ, ಎಡಗೈ ಆರಂಭಿಕ ಫಕ್ರ್ ಜಮಾನ್ (193) ದಿಟ್ಟ ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 324 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

193 ರನ್ ಗಳಿಸಿದ್ದ ಫಕ್ರ್ ಜಮಾನ್ ಅವರು ವಿವಾದಾತ್ಮಕ ರೀತಿಯಲ್ಲಿ ರನೌಟ್ ಆಗಿದ್ದರು. ಆದರೆ ಡಿ ಕಾಕ್ ಮೋಸ ಮಾಡಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಐಸಿಸಿ ಯಾವ ನಿರ್ಣಯವನ್ನು ಕೈಗೊಳ್ಳಲಿದೆ ಎಂಬುದು ಕುತೂಹಲವೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.