ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಚೊಚ್ಚಲ ಪ್ರವಾಸ ಕೈಗೊಂಡಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಗಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.
ಉರಿಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಯುವಕರು ಕ್ರಿಕೆಟ್ ಆಡುವುದನ್ನು ಗಮನಿಸಿದ ಸಚಿನ್, ತಕ್ಷಣವೇ ತಮ್ಮ ಕಾರಿನಿಂದ ಇಳಿದು ಯುವಕರೊಂದಿಗೆ ಕ್ರಿಕೆಟ್ ಆಡಿದರು.
ಈ ಸಂಬಂಧ ವಿಡಿಯೊ ಹಂಚಿರುವ ಸಚಿನ್, 'ಕ್ರಿಕೆಟ್ ಮತ್ತು ಕಾಶ್ಮೀರ - ಸ್ವರ್ಗದಲ್ಲಿ ಆಟ' ಎಂದು ಬರೆದುಕೊಂಡಿದ್ದಾರೆ.
ಕಾಶ್ಮೀರಕ್ಕೆ ಮತ್ತೆ ಬರಲು ಇಷ್ಟಪಡುತ್ತೇನೆ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ ಅವರ ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಜೊತೆಗಿದ್ದರು. ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿ ಸಚಿನ್ ಅವರು ಕ್ರಿಕೆಟ್ ಬ್ಯಾಟ್ ತಯಾರಕಾ ಘಟಕಕ್ಕೆ ಭೇಟಿ ನೀಡಿದ್ದಾರೆ. ಅಮನ್ ಸೇತು ಬಳಿಯ ಕಮಾನ್ ಪೋಸ್ಟ್‌ನಲ್ಲಿ ಯೋಧರೊಂದಿಗೆ ಸಂವಾದವನ್ನೂ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.