ADVERTISEMENT

ಕ್ರಿಕೆಟ್‌: ಎಂಸಿಸಿಗೆ ಸಂಗಕ್ಕರ ನಾಯಕ

ಏಜೆನ್ಸೀಸ್
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಕುಮಾರ ಸಂಗಕ್ಕರ
ಕುಮಾರ ಸಂಗಕ್ಕರ   

ಲಂಡನ್‌ : ಮೆರಿಲ್‌ಬಾನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಂಡವು ಮುಂದಿನ ವರ್ಷ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು ತಂಡವನ್ನು ಕ್ಲಬ್‌ನ ಅಧ್ಯಕ್ಷ ಕುಮಾರ ಸಂಗಕ್ಕರ ಮುನ್ನಡೆಸುವರು. ಈ ವಿಷಯವನ್ನು ಕ್ಲಬ್ ಬುಧವಾರ ತಿಳಿಸಿದ್ದು ಒಂದು ದಶಕದ ನಂತರ ಕಳೆದ ವಾರ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯ ನಡೆದಿರುವುದು ಭರವಸೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.

2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡಲು ತೆರಳಿದ್ದಾಗ ತಂಡವಿದ್ದ ಬಸ್‌ ಮೇಲೆ ಲಾಹೋರ್‌ನ ಗದಾಫಿ ಕ್ರೀಡಾಂಗಣದ ಬಳಿ ಉಗ್ರರು ದಾಳಿ ನಡೆಸಿದ್ದರು. ಇದರಿಂದ ಕೆಲವು ಆಟಗಾರರು ಗಾಯಗೊಂಡಿದ್ದರು. ನಂತರ 10 ವರ್ಷ ಆ ದೇಶಕ್ಕೆ ಯಾವ ತಂಡವೂ ಪ್ರವಾಸ ಕೈಗೊಂಡಿರಲಿಲ್ಲ. ಕಳೆದ ವಾರ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆದಿದ್ದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಎರಡನೇ ಪಂದ್ಯ ಗುರುವಾರ ಕರಾಚಿಯಲ್ಲಿ ಆರಂಭವಾಗಲಿದೆ.

‘ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನವನ್ನು ಸ್ವೀಕರಿಸಿದ್ದೇವೆ. ತಂಡ ಫೆಬ್ರುವರಿಯಲ್ಲಿ ಲಾಹೋರ್‌ಗೆ ತೆರಳಲಿದ್ದು ಕೆಲವು ‍ಪಂದ್ಯಗಳನ್ನು ಆಡಲಿದೆ’ ಎಂದು ಎಂಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಕ್ರಿಕೆಟ್ ಆಡುವ ಎಲ್ಲ ರಾಷ್ಟ್ರಗಳಂತೆ ಪಾಕಿಸ್ತಾನವೂ ಸುರಕ್ಷಿತವಾಗಿದೆ. ಆದ್ದರಿಂದ ಇಲ್ಲಿ ಪಂದ್ಯಗಳನ್ನು ನಡೆಸಲು ಯಾವುದೇ ತೊಂದರೆ ಇಲ್ಲ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ವಾಸಿಂ ಖಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.