ಇದೇ ಮೊದಲ ಸಲ ಆಯೋಜಿಸಲಾಗಿದ್ದ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಇದರೊಂದಿಗೆ ಈ ಟೂರ್ನಿಯಲ್ಲಿ ತಂಡ ಮುನ್ನಡೆಸಿದ್ದ ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಅವರು ಐಸಿಸಿ ಪ್ರಶಸ್ತಿ ಜಯಿಸಿದ ಭಾರತದ ಮೊದಲ ನಾಯಕಿ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್, ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಸಾಲಿಗೂ ಸೇರಿದ್ದಾರೆ.
ಭಾರತ ತಂಡ 1983ರಲ್ಲಿ ಕಪಿಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಅದಾದ ನಂತರ ಧೋನಿ ನಾಯಕರಾಗಿ ಮೂರು ಬಾರಿ ಐಸಿಸಿ ಪ್ರಶಸ್ತಿ ಗೆದ್ದಿದ್ದಾರೆ. ಕೊಹ್ಲಿ 19 ವರ್ಷದೊಳಗಿನ ತಂಡದ ನಾಯಕರಾಗಿ ಏಕದಿನ ವಿಶ್ವಕಪ್ ಜಯಿಸಿದ್ದಾರೆ.
ಉಳಿದಂತೆ, ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ಪೃಥ್ವಿ ಶಾ, ಉನ್ಮುಕ್ತ್ ಚಾಂದ್, ಯಶ್ ಧುಳ್ ಐಸಿಸಿ ಪ್ರಶಸ್ತಿ ಜಯಿಸಿದ ನಾಯರಾಗಿದ್ದಾರೆ.
ಫೈನಲ್ ಫಲಿತಾಂಶ
ದಕ್ಷಿಣ ಆಫ್ರಿಕಾದ ಪೊಷೆಫ್‌ಸ್ಟ್ರೂಮ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಯಿತು.
ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಕಲೆಹಾಕಿ ಜಯದ ನಗೆ ಬೀರಿತು.
ಐಸಿಸಿ ಪ್ರಶಸ್ತಿ ಗೆದ್ದ ನಾಯಕರು
** | ನಾಯಕ/ನಾಯಕಿ | ಐಸಿಸಿ ಟ್ರೋಫಿ | ವರ್ಷ |
01 | ಕಪಿಲ್ ದೇವ್ | ಏಕದಿನ ವಿಶ್ವಕಪ್ | 1983 |
02 | ಮೊಹಮ್ಮದ್ ಕೈಫ್ | 19 ವರ್ಷದೊಳಗಿನವರ ವಿಶ್ವಕಪ್ | 2000 |
03 | ಸೌರವ್ ಗಂಗೂಲಿ | ಚಾಂಪಿಯನ್ಸ್ ಟ್ರೋಫಿ | 2002 |
04 | ಎಂ.ಎಸ್. ಧೋನಿ | ಟಿ20 ವಿಶ್ವಕಪ್ | 2007 |
05 | ವಿರಾಟ್ ಕೊಹ್ಲಿ | 19 ವರ್ಷದೊಳಗಿನವರ ವಿಶ್ವಕಪ್ | 2008 |
06 | ಎಂ.ಎಸ್. ಧೋನಿ | ಏಕದಿನ ವಿಶ್ವಕಪ್ | 2011 |
07 | ಉನ್ಮುಕ್ತ್ ಚಾಂದ್ | 19 ವರ್ಷದೊಳಗಿನವರ ವಿಶ್ವಕಪ್ | 2012 |
08 | ಎಂ.ಎಸ್. ಧೋನಿ | ಚಾಂಪಿಯನ್ಸ್ ಟ್ರೋಫಿ | 2013 |
09 | ಪೃಥ್ವಿ ಶಾ | 19 ವರ್ಷದೊಳಗಿನವರ ವಿಶ್ವಕಪ್ | 2018 |
10 | ಯಶ್ ಧುಳ್ | 19 ವರ್ಷದೊಳಗಿನವರ ವಿಶ್ವಕಪ್ | 2022 |
11 | ಶೆಫಾಲಿ ವರ್ಮಾ | 19 ವರ್ಷದೊಳಗಿನವರ ಟಿ20 ವಿಶ್ವಕಪ್ | 2023 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.