ADVERTISEMENT

ಗೆಳೆತನ ಮೈದಾನದಿಂದ ಹೊರಗಿರಿಸಬೇಕು: ಗಂಭೀರ್‌ಗೆ ಅಫ್ರಿದಿ ತೀಕ್ಷ್ಣ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2023, 10:49 IST
Last Updated 7 ಸೆಪ್ಟೆಂಬರ್ 2023, 10:49 IST
<div class="paragraphs"><p>ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಕ್ಷಣ</p></div>

ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಕ್ಷಣ

   

(ಪಿಟಿಐ ಚಿತ್ರ)

ಬೆಂಗಳೂರು: ಗೆಳೆತನವನ್ನು ಮೈದಾನದಿಂದ ಹೊರಗಿರಿಸಬೇಕು ಎಂಬ ಗೌತಮ್ ಗಂಭೀರ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಮಾಧ್ಯಮಗಳಿಗೆ ಅಫ್ರಿದಿ ನೀಡಿರುವ ಹೇಳಿಕೆಯನ್ನು 'ಎನ್‌ಡಿಟಿವಿ' ವರದಿ ಮಾಡಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರ ನಡುವಣ ಸ್ನೇಹ ಬಾಂಧವ್ಯದ ಕುರಿತು ಗಂಭೀರ್ ಪ್ರಶ್ನೆ ಎತ್ತಿದ್ದರು. ಮೈದಾನದಲ್ಲಿ ದೇಶದ ಪರ ಆಡುವಾಗ ಸ್ನೇಹವನ್ನು ಹೊರಗಿರಿಸಬೇಕು. ಆಕ್ರಮಣಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಗಂಭೀರ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಫ್ರಿದಿ, ಇದು ಅವರ (ಗಂಭೀರ್) ಅವರ ಆಲೋಚನೆ. ನಾನು ವಿಭಿನ್ನವಾಗಿ ಯೋಚಿಸುತ್ತೇನೆ. ನಾವು ಕ್ರಿಕೆಟಿಗರು ರಾಯಭಾರಿಗಳೂ ಕೂಡ ಆಗಿದ್ದೇವೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದೇವೆ. ನಮ್ಮನ್ನು ಇಷ್ಟಪಡುವವರು ಎರಡೂ ಕಡೆ ಇರುತ್ತಾರೆ. ಆದ್ದರಿಂದ ಪ್ರೀತಿ ಮತ್ತು ಗೌರವದ ಸಂದೇಶವನ್ನು ಕಳುಹಿಸುವುದು ಉತ್ತಮ ಎಂದು ಹೇಳಿದ್ದಾರೆ.

ಹಾಗೆಂದ ಮಾತ್ರಕ್ಕೆ ಮೈದಾನದಲ್ಲಿ ಆಕ್ರಮಣಶೀಲತೆ ಎಂದಲ್ಲ. ಆದರೆ ಮೈದಾನದ ಹೊರಗೂ ಜೀವನವಿದೆ. ನಮ್ಮ ನಮ್ಮ ದೇಶಗಳ ರಾಯಭಾರಿಗಳಾಗಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.