ADVERTISEMENT

ಆಸ್ಟ್ರೇಲಿಯಾ ಸರಣಿಗೆ ವೇಗಿ ಮೊಹಮ್ಮದ್ ಶಮಿ?

ವರ್ಷದ ಬಳಿಕ ಸ್ಪರ್ಧಾ ಕಣಕ್ಕೆ

ಪಿಟಿಐ
Published 15 ನವೆಂಬರ್ 2024, 0:34 IST
Last Updated 15 ನವೆಂಬರ್ 2024, 0:34 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

ನವದೆಹಲಿ: ರಣಜಿ ಟ್ರೋಫಿ ಮೂಲಕ ಕ್ರಿಕೆಟ್‌ಗೆ ಪುನರಾಗಮನ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರ ಪ್ರದರ್ಶನ, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಆಶಾಕಿರಣ ಮೂಡಿಸಿದೆ.

ಕಳೆದ ವರ್ಷದ ಕೊನೆಯಲ್ಲಿ ಸ್ವದೇಶದಲ್ಲಿ ಏಕದಿನ ವಿಶ್ವಕಪ್ ಟೂರ್ನಿ  ವೇಳೆ ಗಾಯಗೊಂಡಿದ್ದ ಶಮಿ ಅವರು ಇಂದೋರ್‌ನಲ್ಲಿ ರಣಜಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.

ADVERTISEMENT

ಬಂಗಾಳ ತಂಡದ ಪರ ಆಡುತ್ತಿರುವ ಶಮಿ, ಮಧ್ಯಪ್ರದೇಶ ತಂಡದ ನಾಯಕ ಶುಭಂ ಶರ್ಮಾ, ಆಲ್‌ರೌಂಡರ್‌ ಸಾರಾಂಶ್ ಜೈನ್ ಅವರ ವಿಕೆಟ್‌ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ಇವರಲ್ಲಿ ಮೂವರು ಬೌಲ್ಡ್ ಆದರೆ, ಒಬ್ಬರು ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾಗೆ ಕ್ಯಾಚಿತ್ತರು. ನಾಲ್ಕು ಸ್ಪೆಲ್‌ಗಳಲ್ಲಿ ಒಟ್ಟು 19 ಓವರ್ ಮಾಡಿದ ವೇಗಿ 54 ರನ್ನಿಗೆ 4 ವಿಕೆಟ್‌ ಪಡೆದರು.

ಭಾರತ ತಂಡದ ಆಯ್ಕೆಗಾರರು ಶಮಿ ಬೌಲಿಂಗ್ ಮೇಲೆ ಕಣ್ಣಿಟ್ಟಿದ್ದು, ಎರಡನೇ ಇನಿಂಗ್ಸ್‌ನಲ್ಲಿ ಅವರ ದೇಹ ಹೇಗೆ ಸ್ಪಂದಿಸುತ್ತದೆ ಎಂಬುದನ್ನೂ ಗಮನಿಸಲಿದ್ದಾರೆ. ರಣಜಿ ಪಂದ್ಯ ನವೆಂಬರ್ 16ರಂದು ಮುಗಿಯಲಿದ್ದು, ಆ ಬಳಿಕವಷ್ಟೇ ಅವರು ಭಾರತ ತಂಡಕ್ಕೆ ಮರಳಿ ಸೇರುವರೇ  ಎಂಬುದು ತೀರ್ಮಾನವಾಗಲಿದೆ.

ನಿರೀಕ್ಷೆಗೆ ತಕ್ಕಂತೆ ಬೌಲಿಂಗ್‌ ಪ್ರದರ್ಶಿಸಿದರೆ, ಅಸ್ಟ್ರೇಲಿಯಾ ವಿರುದ್ಧ ಸರಣಿಯ ಎರಡನೆ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಜತೆ ದಾಳಿಗಿಳಿಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.